ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದರ್ಶನ ಅವಧಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಪರಿಷ್ಕೃತ ಸಮಯದ ಅನ್ವಯ 2ನೇ ಅವಧಿಯ ದರ್ಶನ ಅವಧಿಯನ್ನು ಅಪರಾಹ್ನ 3ರಿಂದ ರಾತ್ರಿ 11ರ ವರೆಗೆ ವಿಸ್ತರಿಸಲಾಗಿದೆ.
Advertisement
ಕೊರೊನಾ ಅನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಸೋಮವಾರ 76 ಸಾವಿರ ಭಕ್ತರು ದೇಗುಲಕ್ಕೆ ಆಗಮಿಸಿದ್ದರು. ಇದೇ ವೇಳೆ ಜ.20ರ ವರೆಗೆ ವಿಮಾನದಲ್ಲಿ ಪ್ರಯಾಣಿಸುವ ಭಕ್ತರ ಅನುಕೂಲಕ್ಕಾಗಿ ತೆಂಗಿನಕಾಯಿಯನ್ನು ಕ್ಯಾಬಿನ್ ಲಗೇಜ್‌ನಲ್ಲಿ ಸೇರಿಸಲು ಒಪ್ಪಲಾಗಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾಯಿಸಲಾಗಿದೆ.