Advertisement

“ಸಾರ್ವಭೌಮ’ನ ಟೀಸರ್‌ಗೆ ಭರ್ಜರಿ ಮೆಚ್ಚುಗೆ: Watch

03:38 PM Dec 22, 2018 | Team Udayavani |

ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ “ನಟಸಾರ್ವಭೌಮ’ ಸಿನಿಮಾದ ಟೀಸರ್​ ರಿಲೀಸ್ ಆಗಿದ್ದು, ಬಿಡುಗಡೆಯಾದ ಮೂರು ಗಂಟೆಗಳಲ್ಲೇ ಯೂಟ್ಯೂಬ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಪವರ್​ಸ್ಟಾರ್​ ಚಿತ್ರವೆಂದರೆ ಅಲ್ಲಿ ಸಾಹಸ, ಸೆಂಟಿಮೆಂಟ್​, ಹಾಡು, ನೃತ್ಯಕ್ಕೆ ಕೊರತೆ ಇರಲ್ಲ. ಈ ಮೊದಲೇ ಸುದ್ದಿಯಾಗಿದಂತೆ ಅಪ್ಪು ಎನರ್ಜಿ ಫುಲ್​ ಡ್ಯಾನ್ಸ್​, ಪವರ್ ಫುಲ್​ ಫೈಟ್​, ಎಲ್ಲವೂ “ನಟಸಾರ್ವಭೌಮ’ ಸಿನಿಮಾದಲ್ಲಿದೆ ಎಂದು ಟೀಸರ್ ನೋಡಿದಾಗ ತಿಳಿಯುತ್ತದೆ. ಅಲ್ಲದೇ ಅಪ್ಪು ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಿದ್ದಾರೆ. 

ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಟಿಸಿದ್ದಾರೆ. ಇಮಾನ್‌ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ತೆರೆ ಮೇಲೆ ಬರಲು “ನಟಸಾರ್ವಭೌಮ’ ಸಜ್ಜಾಗಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next