Advertisement

ಕಸಾಪ ಕಾಪು ತಾ|ಘಟಕದಿಂದ ಸ್ವಾತಂತ್ರ್ಯ ಸೇನಾನಿ ಬಂಟಕಲ್ಲು ದಿ|ಕೆ.ಎಲ್‌ ಶರ್ಮಾ ಸಂಸ್ಮರಣೆ

05:57 PM Jul 25, 2022 | Team Udayavani |

ಶಿರ್ವ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದಡಿಯಲ್ಲಿ ಅಮೃತಾಂಜಲಿ ಹಿರಿಯ ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ-ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ|ಕೋಟೆ ಲಕ್ಷ್ಮೀ ನಾರಾಯಣ ಶರ್ಮಾ ಅವರ ಸಂಸ್ಮರಣೆಯು ಅವರ ನಿವಾಸ ಬಂಟಕಲ್ಲು ಕಲ್ಲಿಕುಮೇರು ಮನೆಯಲ್ಲಿ  ಜು.24ರಂದು ಸಂಜೆ ನಡೆಯಿತು.

Advertisement

ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ ರಾವ್‌ ಸ್ವಾತಂತ್ರ್ಯ ಹೋರಾಟಗಾರ ದಿ|ಕೆ.ಎಲ್‌ ಶರ್ಮಾಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಮಹಾತ್ಮಾ ಗಾಂಧೀಜಿ ಯವರನ್ನು ಹತ್ತಿರದಿಂದ ಕಂಡು ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು.  ಆಚಾರ್ಯ ವಿನೋಬಾ ಬಾವೆಯವರ ಭೂದಾನ ಚಳುವಳಿಯಲ್ಲಿ ಕೂಡಾ ಭಾಗವಹಿಸಿದ್ದ ತಾಮ್ರ ಪ್ರಶಸ್ತಿ ಪುರಸ್ಕೃತ ಕೆ.ಎಲ್‌ ಶರ್ಮಾ ಅವರ ಹೋರಾಟದ ಕಿಚ್ಚು,ಛಲ ನಮಗೆಲ್ಲರಿಗೂ ಆದರ್ಶಪ್ರಾಯವಾಗಲಿ ಎಂದು ಹೇಳಿದರು.

ಶಿರ್ವ ಗ್ರಾಮ ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌,ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ,ಯುವ ಬರಹಗಾರ ಪ್ರದೀಪ್‌ ಬಸ್ರೂರು, ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ ಮತ್ತು ದಿ|ಕೆ.ಎಲ್‌ ಶರ್ಮಾಅವರ ಪುತ್ರ ,ಕೃಷಿಕ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿದರು. ಕಾಪು ತಾ| ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌,ಕಾಪು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ|ಅನಿಲ್‌ ಕುಮಾರ್‌ ಶೆಟ್ಟಿ ,ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಪ್ರಕಾಶ್‌ ಅಮ್ಮಣ್ಣಾಯ, ವಿದ್ಯಾ ಅಮ್ಮಣ್ಣಾಯ, ಅನಂತ ಮೂಡಿತ್ತಾಯ, ಐಡಾ ಗಿಬ್ಟಾ ಡಿಸೋಜಾ,ಗೀತಾ ವಾಗ್ಲೆ,ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ, ಪ್ರೊ| ವಿಟ್ಠಲ ನಾಯಕ್‌, ಶ್ರೀರಾಮ ದಿವಾಣ,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು, ಕಸಾಪ ತಾಲೂಕು ಘಟಕದ ಸದಸ್ಯರು, ಕನ್ನಡಾಭಿಮಾನಿಗಳು,ದಿ| ಶರ್ಮಾ ಅವರ ಕುಟುಂಬಸ್ಥರು, ಅಭಿಮಾನಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಪು ಕಸಾಪ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಕಸಾಪ ತಾಲೂಕು ಸಮಿತಿ ಸದಸ್ಯ ಎಸ್‌. ಎಸ್‌. ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿ, ವಿದ್ಯಾಧರ ಪುರಾಣಿಕ್‌ವಂದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next