Advertisement

ಬೆಂಕಿ ಹಚ್ಚಲು ಬಂದಿದ್ದಾರೋ, ಬಾಂಬ್‌ ಇಡಲು ಬಂದಿದ್ದಾರೋ.. ಶೋಭಾ ವಿರುದ್ಧ ಸೋಮಶೇಖರ್‌ ಕಿಡಿ

09:52 PM Mar 21, 2024 | Team Udayavani |

ಬೆಂಗಳೂರು: ಅಡ್ಡಮತದಾನಕ್ಕಾಗಿ ನೋಟಿಸ್‌ ಕೊಟ್ಟರೂ ಕಾಂಗ್ರೆಸ್‌ ನಾಯಕರ ಮನೆಗೆ ಎಡತಾಕುವುದನ್ನು ನಿಲ್ಲಿಸದ ಬಿಜೆಪಿ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಟಾರ್‌  ಅವರು ಗುರುವಾರ ಡಿಸಿಎಂ ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ  ಭೇಟಿ ನೀಡಿದ್ದಾರೆ. ಜತೆಗೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಸೋಮಶೇಖರ್‌ ಕಿಡಿಕಾರಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬಳಿಕ ನನ್ನ ಕ್ಷೇತ್ರಕ್ಕೆ ಭೇಟಿ ಕೊಡುವುದಕ್ಕೆ ನಾನೇ ಭಯಪಡುವಂಥ ಸನ್ನಿವೇಶ ನಿರ್ಮಾಣವಾಗಿದೆ. ಯಾರು ಏನು ಮಾತನಾಡುತ್ತಾರೋ, ಯಾರನ್ನು ಎತ್ತಿ ಕಟ್ಟುತ್ತಾರೋ ಎಂಬ ಭಯ ಪ್ರಾರಂಭವಾಗಿದೆ. ಬೆಂಕಿ ಉಂಡೆಯಂಥ ಮಾತನಾಡುತ್ತಿದ್ದಾರೆ. ನನಗೆ ನನ್ನ ರಕ್ಷಣೆ ಮುಖ್ಯವಾಗಿದ್ದು, ಪೊಲೀಸ್‌ ಆಯುಕ್ತರಲ್ಲಿ ನೆರವು ಕೇಳ ಬೇಕೆಂದಿದ್ದೇನೆ. ಇವರು ಬೆಂಕಿ ಹಚ್ಚಲು ಬಂದಿದ್ದಾರೋ, ಬಾಂಬ್‌ ಇಡಲು ಬಂದಿದ್ದಾರೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪಕ್ಷ ಶುದ್ಧೀಕರಣದ ಬಗ್ಗೆ  ಹಾಲಿ ಸಂಸದ ಡಿ.ವಿ.ಸದಾನಂದ ಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ಸಣ್ಣ ವ್ಯತ್ಯಾಸವೂ ಆಗಿರಲಿಲ್ಲ. ಡಿ.ಬಿ.ಚಂದ್ರೇಗೌಡರು ಸಂಸದರಾಗಿದ್ದಾಗಲಾಗಲಿ, ಸದಾನಂದ ಗೌಡರು 10 ವರ್ಷ ಸಂಸತ್‌ ಸದಸ್ಯರಾಗಿದ್ದಾಗಲಾಗಲಿ ಸಮಸ್ಯೆ ಆಗಿರಲಿಲ್ಲ ಎನ್ನುವ ಮೂಲಕ ಶೋಭಾ ಕರಂದ್ಲಾಜೆ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಡಿ.ಕೆ.ಶಿವಕುಮಾರ್‌ ಅವರನ್ನು  ಕಳೆದೊಂದು ವಾರದಿಂದ ಭೇಟಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಸಮಸ್ಯೆ ಬಗೆಹರಿಸುವಂತೆ ಜಲಮಂಡಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next