Advertisement

ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ಗೆ ಧಾರ್ಕರ್‌

11:58 PM Oct 01, 2022 | Team Udayavani |

ಶಿಲ್ಲಾಂಗ್‌: ಭಾರತೀಯ ವಾಯುಪಡೆಯ ಪೂರ್ವ ಏರ್‌ ಕಮಾಂಡ್‌ನ‌ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಎಸ್‌.ಪಿ.ಧಾರ್ಕರ್‌ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

Advertisement

ಈವರೆಗೆ ಈ ಸ್ಥಾನದಲ್ಲಿದ್ದ ಏರ್‌ ಮಾರ್ಷಲ್‌ ಡಿ.ಕೆ.ಪಟ್ನಾಯಕ್‌ ನಿವೃತ್ತರಾಗಿದ್ದಾರೆ. ಏರ್‌ ಮಾರ್ಷಲ್‌ ಧಾರ್ಕರ್‌ ಅವರು ಗಾಂಧಿನಗರದಲ್ಲಿರುವ ನೈಋತ್ಯ ಏರ್‌ ಕಮಾಂಡ್‌ನ‌ ಹಿರಿಯ ಏರ್‌ ಸ್ಟಾಫ್ ಆಫೀಸರ್‌ ಆಗಿ ಸೇವೆ ಸಲ್ಲಿಸಿದ್ದಾರೆ.

ರಕ್ಷಣ ಬಾಹ್ಯಾಕಾಶ ಏಜೆನ್ಸಿಯ ಮಹಾ ನಿರ್ದೇಶಕರಾ ಗಿಯೂ ಸೇವೆ ಸಲ್ಲಿಸಿರುವ ಅವರಿಗೆ 3,600 ಗಂಟೆಗಳ ಹಾರಾಟದ ಅನುಭವವಿದೆ. ಅವರು 1985ರ ಜೂನ್‌ನಿಂದ ವಾಯುಪಡೆಯ ಕರ್ತವ್ಯದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next