Advertisement

ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!

11:50 PM Jul 26, 2021 | Team Udayavani |

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಈವರೆಗೆ ರಾಜ್ಯದಲ್ಲಿ 8 ಮಂದಿ ಲಿಂಗಾಯತ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಎಸ್‌. ನಿಜಲಿಂಗಪ್ಪ ಹೊರತುಪಡಿಸಿ ಲಿಂಗಾಯತ ಸಮುದಾಯದ ಬೇರೆ ಯಾವ ಮುಖ್ಯಮಂತ್ರಿಯೂ ಅವಧಿ ಪೂರ್ಣಗೊಳಿಸಿಲ್ಲ.

Advertisement

ವಿಶೇಷವೆಂದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಧಿಕಾರದ ಹೆಬ್ಟಾಗಿಲು ತೆರೆದು, ಅತೀ ಕಡಿಮೆ ಅವಧಿಗೆ ಅಂದರೆ, 3 ದಿನ ಹಾಗೂ ಅತಿ ಹೆಚ್ಚು ಬಾರಿ ಅಂದರೆ, ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ಆಲಂಕರಿಸಿದ್ದ ಬಿ.ಎಸ್‌. ಯಡಿಯೂರಪ್ಪನವರು ಯಾವತ್ತೂ ಅವಧಿ ಪೂರ್ಣಗೊಳಿಸಿಲ್ಲ. 1962ರಿಂದ 1967 ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದ ನಿಜಲಿಂಗಪ್ಪ ಹೊರತುಪಡಿಸಿದರೆ ಇನ್ನೊಬ್ಬ ಲಿಂಗಾಯತ ನಾಯಕ ಪೂರ್ಣಾವಧಿ ಆಡಳಿತ ನಡೆಸಲಿಲ್ಲ.

ಮೈಸೂರು ಪ್ರಾಂತ್ಯ, ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕದ ಸ್ಥಾಪನೆ ಆದ ನಂತರದಲ್ಲಿ ಒಟ್ಟು 23 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ 8 ಮಂದಿ ಲಿಂಗಾಯತರು, ಏಳು ಮಂದಿ ಒಕ್ಕಲಿಗರು, ಐವರು ಹಿಂದುಳಿದ ವರ್ಗಕ್ಕೆ ಸೇರಿದವರು, 2 ಬ್ರಾಹ್ಮಣರು ಇದ್ದಾರೆ. ವ್ಯಕ್ತಿ ಹಾಗೂ ಅವಧಿಯನ್ನು ಪರಿಗಣಿಸಿದರೆ ಲಿಂಗಾಯತರೇ ಅತಿಹೆಚ್ಚು ಅಂದರೆ, ಸುಮಾರು 23 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಆದರೆ, ಒಬ್ಬರನ್ನು ಹೊರತುಪಡಿಸಿ ಯಾರೊಬ್ಬರೂ ಅವಧಿ ಪೂರ್ಣಗೊಳಿಸಿಲ್ಲ.

ಕರ್ನಾಟಕ ಏಕೀಕರಣದ ನಂತರದ ಒಂದೂವರೆ ದಶಕಗಳ ಕಾಲ ಲಿಂಗಾ ಯತರ ಪ್ರಾಬಲ್ಯ ನಿರಂಕುಶವಾಗಿತ್ತು. 1956ರ ನವೆಂಬರ್‌ 1ರಿಂದ ಆರಂಭ ಗೊಂಡು 1971ರ ಮಾರ್ಚ್‌ 18ರವರೆ ಗಿನ ಅವಧಿಯಲ್ಲಿ 4 ಮಂದಿ ಲಿಂಗಾಯತ ನಾಯಕರು ಮೈಸೂರು ರಾಜ್ಯದ ಮುಖ್ಯಮಂತ್ರಿ ಗಾದಿಗೇರಿದ್ದರು. 1967ರವರೆಗೆ ಲಿಂಗಾಯತ ಶಾಸಕ ಬಲ 80-90ರವರೆಗೆ ಇರುತ್ತಿತ್ತು. ನಂತರದ ಚುನಾವಣೆಗಳಲ್ಲಿ 50-60ಕ್ಕೆ ಕುಸಿಯಿತು. 1962ರಿಂದ 1967ರವರೆಗೆ ಪೂರ್ಣಾವಧಿ ಆಡಳಿತ ನಡೆ ಸಿದ ನಿಜಲಿಂಗಪ್ಪ ಹೊರತುಪಡಿಸಿದರೆ ಇನ್ನೊಬ್ಬ ಲಿಂಗಾ ಯತ ನಾಯಕ ಪೂರ್ಣಾವಧಿ ಆಡಳಿತ ನಡೆಸಲಿಲ್ಲ.

 

Advertisement

ರಫೀಕ್‌ ಅಹ್ಮದ್‌

 

Advertisement

Udayavani is now on Telegram. Click here to join our channel and stay updated with the latest news.

Next