ಗುಡಿಬಂಡೆ: ತಾಲೂಕು ಚಿಕ್ಕದಾದರು ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ,ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆ ಮಾತಿಗೆ ಸರಿಮನಾಗಿ ನಿಂತಿದೆ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾತನಾಡಿದ ಅವರು, ಒಂದುಚಿಕ್ಕತಾಲೂಕು ಕರ್ನಾಟಕ ರಾಜ್ಯದಲ್ಲೇ ಶೈಕ್ಷಣಿಕ, ಸಕಾಲ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿಹೆಸರು ವಾಸಿಯಾಗಿದೆ. ಇಂದು ಕೆಲವರುಸಂವಿಧಾನವನ್ನು ಪುನರ್ ರಚನೆ ಮಾಡಬೇಕು ಎಂದು ಹೇಳುತ್ತಾರೆ. ಹಾಗೊಮ್ಮೆ ಮಾಡಿದ್ದೇ ಆದಲ್ಲಿ, ಅವರಿಗೆ ಉಳಿಗಾಲವೇ ಇಲ್ಲ ಎಂದು ವಿವರಿಸಿದರು.
ಹಬ್ಬದಂತೆ ಆಚರಿಸಿ: ತ್ಯಾಗ ಬಲಿದಾನದ ಸಂಕೇತವಾಗಿ ನಾವು ಆಚರಿಸುವಂತಹ ರಾಷ್ಟ್ರೀಯ ಹಬ್ಬಗಳು ಕೇವಲ ಸರ್ಕಾರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ, ಪ್ರತಿಯೊಬ್ಬರು ಧಾರ್ಮಿಕ ಹಬ್ಬಗಳಂತೆ ಎಲ್ಲರ ಮನೆಗಳಲ್ಲೂ ಆಚರಿಸುವಂತಾಗಬೇಕು ಎಂದು ಹೇಳಿದರು.
ನಿಜವಾದ ಗೌರವ ನೀಡಿದಂತೆ: ನಮಗೆ ಸ್ವಾತಂತ್ರ್ಯ ಬರಲು ಅನೇಕ ಮಹನೀಯರ ತ್ಯಾಗ, ಬಲಿದಾನಕಾರಣವಾಗಿದೆ. ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ವ್ಯಕ್ತಿಗಳ ಸ್ಮರಣಾರ್ಥ ಇಂದು ನಾವುಆಚರಿಸುವ ರಾಷ್ಟ್ರೀಯ ಹಬ್ಬಗಳನ್ನು ಧಾರ್ಮಿಕ ಹಬ್ಬಗಳಂತೆ ಎಲ್ಲರೂ ಸಡಗರದಿಂದ ಆಚರಣೆಮಾಡಿದಾಗ ಮಾತ್ರ, ಮಹಾತ್ಮರಿಗೆ ನಾವು ನಿಜವಾದಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
Related Articles
ಕಾನೂನುಗಳ ತಿಳಿದುಕೊಳ್ಳಿ: ನಂತರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿಮಾತನಾಡಿದ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ವೆಂಕಟರಮಣ್, ಸಂವಿಧಾನ ರಚನೆ ಮಾಡಲು ಪ್ರಾರಂಭಿಸಿದಾಗಿನಿಂದ ಸಂವಿಧಾನ ಹೊರಬಂದು, ಅದರ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರದೊಂದಿಗೆ ಎಲ್ಲಾ ವಿವರಗಳನ್ನು ಎಳೆಎಳೆಯಾಗಿ ವಿವರಿಸಿ, ಜನರುಸಂವಿಧಾನಾತ್ಮಕ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಸಿಗ್ಬತ್ತುಲ್ಲಾ, ಇಒಬಿಂಧು, ಪಪಂ ಮುಖ್ಯಾಧಿ ಕಾರಿ ಸಬಾಶಿರಿನ್,ಬಿಇಒ ಮುನೇಗೌಡ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.