Advertisement

ಚುನಾವಣಾ ರಾಜಕಾರಣದಿಂದ ದೂರಾದರೇ ಮಾಯಾವತಿ?

06:42 PM Jan 11, 2022 | Team Udayavani |

ಉತ್ತರಪ್ರದೇಶ:ಉತ್ತರಪ್ರದೇಶದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಈ ಬಾರಿ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆಂಬ ಸುದ್ದಿ ಹೊರಬಿದ್ದಿದೆ.

Advertisement

ಖುದ್ದು ಬಿಎಸ್ಪಿ ಸಂಸದ ಸತೀಶ್ ಚಂದ್ರ ಮಿಶ್ರಾ ಈ ಹೇಳಿಕೆ ನೀಡಿದ್ದಾರೆ. ಮಾಯಾವತಿ ಹಾಗೂ ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಬಿಎಸ್‌ಪಿ ಹಾಗೂ ಕಾಂಗ್ರೆಸ್ ಮತ್ತೊಮ್ಮೆ ಶೋಚನೀಯ ಪ್ರದರ್ಶನ ನೀಡಲಿವೆ ಎಂದು ಸರ್ವೆಗಳು ಹೇಳುತ್ತಿರುವುದರ ಬೆನ್ನಲ್ಲೇ ಬಿಎಸ್ಪಿ ಪಾಳಯದಿಂದ ಬಂದಿರುವ ಈ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈ ಮೂಲಕ ರಾಜಕೀಯ ನೇಪಥ್ಯಕ್ಕೆ ಸರಿಯುವ ಮಒದಲ ಹೆಜ್ಜೆಯನ್ನು ಮಾಯಾವತಿ ಇಡುತ್ತಿದ್ದಾರೆಯೇ ಎಂಬ ವ್ಯಾಖ್ಯಾನ ಆರಂಭವಾಗಿದೆ.

ಇಷ್ಟರ ಮಧ್ಯೆಯೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ತಿರುಗೇಟು ನೀಡಿರುವ ಮಿಶ್ರಾ, ಸಮಾಜವಾದಿ ಪಕ್ಷಕ್ಕೆ ನಾಲ್ಕು ನೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ಅಭ್ಯರ್ಥಿಗಳೇ ಇಲ್ಲ. ಆದರೂ ೪೦೦ ಸ್ಥಾನದಲ್ಲಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಅಥವಾ ಎಸ್ಪಿ ಅಧಿಕಾರಕ್ಕೆ ಬರುವುದಿಲ್ಲ. ಬಹುಜನ ಸಮಾಜವಾದಿ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತದೆ. ನಾವೇ ಸರಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next