Advertisement

ಒಲಿಂಪಿಯನ್‌ ಈಜು ತಾರೆ ರ್ಯಾನ್‌ ಲೋರ್ಟಾ ಅಮಾನತು

06:00 AM Jul 25, 2018 | Team Udayavani |

ನ್ಯೂಯಾರ್ಕ್‌: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಅಮೆರಿಕದ ಆರು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ ಅಮೆರಿಕದ ರ್ಯಾನ್‌ ಲೋರ್ಟಾ ಅವರನ್ನು 14 ತಿಂಗಳು ಅಮಾನತು ಮಾಡಲಾಗಿದೆ. ಯುಎಸ್‌ ಉದ್ದೀಪನ ನಿಗ್ರಹ ತನಿಖಾ ತಂಡ (ಯುಎಸ್‌ಎಡಿಎ) ಸೋಮವಾರ ಈ ಕ್ರಮ ತೆಗೆದುಕೊಂಡಿದೆ. 

Advertisement

“ರ್ಯಾನ್‌ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ಚುಚ್ಚುಮದ್ದು ನೀಡಲಾಗಿದೆ. ಜತೆಗೆ ಚಿಕಿತ್ಸೆಯ ಸಮಯದಲ್ಲಿ 12 ಗಂಟೆಯೊಳಗೆ ಪದೇ ಪದೆ ಚುಚ್ಚು ಮದ್ದು ಹಾಕಿಸಿ ಕೊಂಡಿದ್ದಾರೆ.  ಯುಎಸ್‌ಎಡಿಎಗೆ  ಸೂಕ್ತ ಮಾಹಿತಿ ಯನ್ನೂ ನೀಡಿರಲಿಲ್ಲ. ಎಲ್ಲ ನಿಯಮವನ್ನು ರ್ಯಾನ್‌ ಗಾಳಿಗೆ ತೂರಿದ್ದಾರೆ. ಅವರು ಸೇವಿಸಿರುವುದು ಉದ್ದೀಪನ ಮದ್ದು ಅಲ್ಲದಿದ್ದರೂ ಮದ್ದಿನ ಅಂಶಗಳು ದೇಹದೊಳಕ್ಕೆ ಹೋಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅವರು ಚಿಕಿತ್ಸೆ ದೃಷ್ಟಿಯಿಂದ ಅರಿವಿಲ್ಲದೆ ಸೇವಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಪ್ಪು ಎಸಗದಿರುವ ಕಾರಣಕ್ಕೆ 33 ವರ್ಷದ ರ್ಯಾನ್‌ಗೆ 14 ತಿಂಗಳ ನಿಷೇಧ ಶಿಕ್ಷೆಯನ್ನು ನೀಡಿದ್ದೇವೆ’ ಎಂದು ಯುಎಸ್‌ಎಡಿಎ ತಿಳಿಸಿದೆ.

ಒಲಿಂಪಿಕ್ಸ್‌ನಲ್ಲಿ ರ್ಯಾನ್‌ ಲೋರ್ಟಾ 2 ಚಿನ್ನ, 2 ಕಂಚಿನ ಪದಕ ಜಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next