Advertisement

ರುಸ್ತುಂ ಪೋಸ್ಟರ್‌ ರಿಲೀಸ್‌ 

02:33 PM Apr 24, 2018 | |

ಸಾಹಸ ನಿರ್ದೇಶಕ ರವಿವರ್ಮ ಅವರು ಶಿವರಾಜಕುಮಾರ್‌ ಅವರಿಗೆ “ರುಸ್ತುಂ’ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ರಾಜಕುಮಾರ್‌ ಅವರ ಬರ್ತ್‌ಡೇ ದಿನದಂದು ಚಿತ್ರಕ್ಕೆ ಮುಹೂರ್ತ ನೆರವೇರುತ್ತಿದ್ದು, ಅಂದೇ ಚಿತ್ರ ಪೋಸ್ಟರ್‌ ಕೂಡ ರಿಲೀಸ್‌ ಮಾಡಲು ತಯಾರಿ ನಡೆಸಿದ್ದಾರೆ ರವಿವರ್ಮ.

Advertisement

ಈ ಚಿತ್ರವನ್ನು ಜಯಣ್ಣ -ಭೋಗೇಂದ್ರ ನಿರ್ಮಿಸುತ್ತಿದ್ದಾರೆ. ರವಿವರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರೊಂದಿಗೆ ಸಾಹಸ ನಿರ್ದೇಶನವನ್ನು ಮಾಡುತ್ತಿದ್ದಾರೆ. ಮಹೇನ್ ಸಿಂಹ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ.

ದೀಪು ಎಸ್ ಕುಮಾರ್ ಸಂಕಲನ ಹಾಗೂ ಆರ್.ಕೆ.ನಾಗು (ಚೆನ್ನೈ) ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಶ್ರದ್ಧಾ ಶ್ರೀನಾಥ್, ಮಯೂರಿ, ಅರ್ಜುನ್ ಗೌಡ, ಶತ್ರು ಮುಂತಾದವರಿದ್ದಾರೆ. ಬೆಂಗಳೂರು, ಮೈಸೂರು, ಪಾಟ್ನಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next