ತಿರುವನಂತಪುರ: ಉಕ್ರೇನ್ ಮೇಲೆ ಯುದ್ಧ ಸಾರಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿದ ರಷ್ಯಾ, ಈಗ ಆ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿದೆ.
ಉಕ್ರೇನ್‌ನಿಂದ ವಾಪಸಾಗಿರುವ ಭಾರತದ ಸುಮಾರು 22 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ (ಈ ಪೈಕಿ ಹೆಚ್ಚಿನವರು ಕೇರಳಿಗರು) ರಷ್ಯಾ ಹೊಸ ಆಫರ್ ನೀಡಿದ್ದು, ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವುದಾಗಿ ಘೋಷಿಸಿದೆ.
ತಿರುವನಂತಪುರದಲ್ಲಿ ನಡೆದ ಮಾಧ್ಯಮ ಸಂವಾದವೊಂದರಲ್ಲಿ ಭಾರತದಲ್ಲಿರುವ ರಷ್ಯಾದ ಉಪ ರಾಯಭಾರಿ ರೋಮನ್ ಬಾಬುಶ್ಕಿನ್ ಅವರು ಈ ಘೋಷಣೆ ಮಾಡಿದ್ದಾರೆ. ಇವರ ಈ ಆಶ್ವಾಸನೆಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ:ಆನೆಗೊಂದಿ ರೆಸಾರ್ಟ್ ಗಳಿಗೆ ಬೀಗ ಮುದ್ರೆ :ಸಚಿವ ಆನಂದ ಸಿಂಗ್ ಜತೆ ರೆಸಾರ್ಟ್ ಮಾಲೀಕರ ವಾಗ್ವಾದ
Related Articles
ಯಾರು ರಷ್ಯಾದ ವಿವಿಯಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಇಚ್ಛಿಸುತ್ತಾರೋ ಅಂಥವರು ತಿರುವನಂತಪುರಂನಲ್ಲಿರುವ ರಷ್ಯಾ ಕಾನ್ಸುಲೇಟ್ ಅನ್ನು ಸಂಪರ್ಕಿಸಿದರೆ ಸಾಕು. ನಾವು ಎಲ್ಲ ವ್ಯವಸ್ಥೆಯನ್ನೂ ಮಾಡುತ್ತೇವೆ.
ಕೆಲವು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸ್ಟೈಪಂಡ್ ಅಥವಾ ಸ್ಕಾಲರ್‌ಶಿಪ್ ಮೂಲಕ ವ್ಯಾಸಂಗ ಮಾಡುತ್ತಿದ್ದರು. ಅಂಥವರಿಗೆ ಅದೇ ಸ್ಟೈಪಂಡ್ ಅಥವಾ ಸ್ಕಾಲರ್‌ಶಿಪ್ ರಷ್ಯಾ ವಿವಿಯಲ್ಲೂ ದೊರಕುವಂತೆ ಮಾಡುತ್ತೇವೆ ಎಂದೂ ಬಾಬುಶ್ಕಿನ್ ಹೇಳಿದ್ದಾರೆ. ಇವರ ಈ ಆಫರ್ ಬಗ್ಗೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.