Advertisement

Russian Tourist: ಗೋವಾ ತಿರುಗಾಡಲು ಬಂದು ಸಮುದ್ರ ಪಾಲಾದ ರಷ್ಯಾ ಪ್ರಜೆ… ಗೆಳತಿಯ ರಕ್ಷಣೆ

01:07 PM Sep 09, 2024 | Team Udayavani |

ಪಣಜಿ: ರಜೆಯಲ್ಲಿ ಗೆಳತಿಯ ಜೊತೆ ಗೋವಾ ತಿರುಗಾಡಲು ಬಂದ ರಷ್ಯಾದ ಪ್ರಜೆಯೊಬ್ಬ ಇಲ್ಲಿನ ಬೀಚ್ ನಲ್ಲಿ ಮುಳುಗಿ ಮೃತಪಟ್ಟಿದ್ದು ಆತನ ಜೊತೆಗಿದ್ದ ಗೆಳತಿಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಭಾನುವಾರ (ಸೆ.8) ರಂದು ನಡೆದಿದೆ.

Advertisement

ರಷ್ಯಾದ ಪ್ರಜೆ ಡಿಮಿಟ್ರಿ ಎಲ್ವೊವ್ (33) ಮೃತಪಟ್ಟಿದ್ದು ತನ್ನ ಗೆಳತಿ ಐರಿನಾ ರುಡೆಮ್ಕೊ (28) ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಭಾನುವಾರ ಡಿಮಿಟ್ರಿ, ಐರಿನಾ ಜೊತೆ ಮುಂಜಾನೆ ಸುಮಾರು ಐದು ಗಂಟೆಯ ವೇಳೆಗೆ ಉತ್ತರ ಗೋವಾದ ಮೊರ್ಜಿಮ್ ಸಮುದ್ರದ ತೀರಕ್ಕೆ ತೆರಳಿದ್ದಾರೆ ಈ ವೇಳೆ ನೀರಿಗೆ ಇಳಿದ ಇಬ್ಬರೂ ಸಮುದ್ರಪಾಲಾಗಿದ್ದಾರೆ ಕೂಡಲೇ ಅಲ್ಲಿದ್ದ ಸ್ಥಳೀಯರು ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಬಲವಾದ ಅಲೆಗಳ ಹೊಡೆತಕ್ಕೆ ಡಿಮಿಟ್ರಿ ಸಮುದ್ರದಲ್ಲಿ ಮುಳುಗಿದ್ದಾರೆ, ಐರಿನಾಳನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಜೀವರಕ್ಷಕ ಸಿಬ್ಬಂದಿ ರಷ್ಯಾದ ಪ್ರಜೆಯ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ… CCTVಯಲ್ಲಿ ಸೆರೆಯಾಯ್ತು ದೃಶ್ಯ

Advertisement

Udayavani is now on Telegram. Click here to join our channel and stay updated with the latest news.

Next