Advertisement

Russia ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೃದಯ ಸ್ತಂಭನ?: ವರದಿ

03:13 PM Oct 24, 2023 | Team Udayavani |

ಮಾಸ್ಕೋ: ರಷ್ಯಾದ ನಾಯಕ ವ್ಲಾದಿಮಿರ್ ಪುಟಿನ್ ಅವರಿಗೆ “ಹೃದಯ ಸ್ತಂಭನ” ವಾಗಿರುವ ಕುರಿತು ರಷ್ಯಾದ ಒಳಗಿನಿಂದ ಕಾರ್ಯಾಚರಿಸುತ್ತಿರುವ ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ.

Advertisement

ಪುಟಿನ್ ಅವರು “ನೆಲದ ಮೇಲೆ ಮಲಗಿದ್ದರು ಮತ್ತು ಕಣ್ಣುಗಳನ್ನು ಹೊರಳಿಸುತ್ತಿದ್ದರು” ಎಂದು ಚಾನೆಲ್ ಹೇಳಿಕೊಂಡಿದೆ. ಈ ಹಿಂದೆ ಇದೇ ಚಾನೆಲ್ ರಷ್ಯಾದ ನಾಯಕನ ಆರೋಗ್ಯದ ಬಗ್ಗೆ ಇದೇ ರೀತಿಯ ಸುದ್ದಿಗಳನ್ನು ವರದಿ ಮಾಡಿತ್ತು, ಅವುಗಳಲ್ಲಿ ಹಲವು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಇತ್ತೀಚಿನ ವರದಿಯಲ್ಲಿ ಹೇಳಲಾದ ಘಟನೆ ಭಾನುವಾರ ಸಂಜೆ (ಅಕ್ಟೋಬರ್ 22) ನಡೆದಿದೆ.

71 ವರ್ಷದ ಪುಟಿನ್ ಅವರನ್ನು ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಲಾದ ವಿಶೇಷ ವೈದ್ಯಕೀಯ ಘಟಕಕ್ಕೆ ದಾಖಲಿಸಿ ವೈದ್ಯರನ್ನು ತತ್ ಕ್ಷಣವೇ ಕರೆಯಿಸಿ ಅಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ವರದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next