ನವದೆಹಲಿ: ಜಿ20 ರಾಷ್ಟ್ರಗಳ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇದೇ 14ರಿಂದ 16ರವರೆಗೆ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಲಿದ್ದಾರೆ.
15, 16 ರಂದು ಶೃಂಗ ನಡೆಯಲಿದೆ. ಡಿ.1ರಂದು ಭಾರತವು ಜಿ20 ಸಮೂಹದ ಅಧ್ಯಕ್ಷತೆ ವಹಿಸಿಕೊಳ್ಳಲಿದೆ ಎಂದು ವಿದೇಶಾಂಗ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಈ ನಡುವೆ, ಮುಂದಿನ ವಾರ ನಡೆಯುವ ಜಿ20 ಶೃಂಗದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಪಾಲ್ಗೊಳ್ಳುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಉಕ್ರೇನ್ ಯುದ್ಧದ ವಿಚಾರದಲ್ಲಿ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಕೆಂಗಣ್ಣಿಗೆ ರಷ್ಯಾ ಗುರಿಯಾಗಿದ್ದು, ಶೃಂಗದಲ್ಲಿ ಈ ದೇಶಗಳ ನಾಯಕರೊಂದಿಗೆ ಮುಖಾಮುಖಿಯಾಗಲು ಇಷ್ಟವಿಲ್ಲದೇ ಪುಟಿನ್ ದೂರವುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.