Advertisement

Russian Helicopter: 22 ಜನರಿದ್ದ ರಷ್ಯಾದ ಹೆಲಿಕಾಪ್ಟರ್ ನಾಪತ್ತೆ… ರಕ್ಷಣಾ ತಂಡದಿಂದ ಶೋಧ

03:29 PM Aug 31, 2024 | Team Udayavani |

ಮಾಸ್ಕೋ: ರಷ್ಯಾದಲ್ಲಿ 22 ಜನರಿದ್ದ ಹೆಲಿಕಾಪ್ಟರ್ ರಷ್ಯಾದ ಪೂರ್ವದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ದ್ವೀಪ ಪ್ರದೇಶದಲ್ಲಿ ಕಣ್ಮರೆಯಾಗಿರುವುದಾಗಿ ವರದಿಯಾಗಿದೆ.

Advertisement

ಫೆಡರಲ್ ಏರ್ ಟ್ರಾನ್ಸ್‌ಪೋರ್ಟ್ ಏಜೆನ್ಸಿಯ ಪ್ರಾಥಮಿಕ ವರದಿಗಳಿಂದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ವಿಚಾರ ದೃಢಪಡಿಸಲಾಗಿದೆ ಮತ್ತು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ಶನಿವಾರ ವಿಚಾರ ಬಹಿರಂಗಪಡಿಸಿದೆ. ಹೆಲಿಕಾಪ್ಟರ್ ನಲ್ಲಿ 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು. ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬೆನ್ನಲ್ಲೇ ರಕ್ಷಣಾ ತಂಡ ಹುಡುಕಾಟ ಆರಂಭಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಎಂಐ -8 ಹೆಲಿಕಾಪ್ಟರ್ ಕಮ್ಚಾಟ್ಕಾ ಪ್ರದೇಶದ ವಾಚ್ಕಜೆಟ್ಸ್ ನಿಂದ ಟೇಕ್ ಆಫ್ ಆಗಿದ್ದು ಇದಾದ ಬಳಿಕ ತನ್ನ ಸಂಪರ್ಕ ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

1960 ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಎರಡು ಎಂಜಿನ್ ಹೊಂದಿರುವ ಹೆಲಿಕಾಪ್ಟರ್ Mi-8 ಅನ್ನು ರಷ್ಯಾ ಮತ್ತು ನೆರೆಯ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಇದಕ್ಕೂ ಮೊದಲು ಆಗಸ್ಟ್ 12 ರಂದು, 16 ಪ್ರವಾಸಿಗರನ್ನು ಹೊತ್ತ Mi-8 ಹೆಲಿಕಾಪ್ಟರ್ ರಷ್ಯಾದ ದೂರದ ಪೂರ್ವ ಪ್ರದೇಶವಾದ ಕಂಚಟ್ಕಾದಲ್ಲಿ ಪತನಗೊಂಡಿತ್ತು.

Advertisement

ಪ್ರವಾಸಿಗರ ಜನಪ್ರಿಯ ತಾಣ:
ಮಾಸ್ಕೋದಿಂದ ಪೂರ್ವಕ್ಕೆ 6,000 ಕಿಲೋಮೀಟರ್ (3,728 ಮೈಲುಗಳು) ಮತ್ತು ಅಲಾಸ್ಕಾದಿಂದ ಪಶ್ಚಿಮಕ್ಕೆ ಸರಿಸುಮಾರು 2,000 ಕಿಲೋಮೀಟರ್ ದೂರದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ತನ್ನ ಪ್ರಾಚೀನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ, ವಿಶೇಷವಾಗಿ ಅಲ್ಲಿನ ಜ್ವಾಲಾಮುಖಿ ಭೂದೃಶ್ಯಗಳು, ದಟ್ಟವಾದ ಕಾಡುಗಳು ಮತ್ತು ಕಡಿದಾದ ಪ್ರದೇಶಗಳು ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ, ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ: WhatsApp ಸ್ಟೇಟಸ್ ಹಾಕಿ ಕಾಲೇಜು ವಿದ್ಯಾರ್ಥಿ ನಾಪತ್ತೆ… ತುಂಗಾ ನದಿ ಬಳಿ ಬೈಕ್ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next