ಮಾಸ್ಕೋ: ಉಕ್ರೇನ್ ಮೇಲಿನ ಆಕ್ರಮಣವನ್ನು ತೀವ್ರಗೊಳಿಸಿರುವ ರಷ್ಯಾವು ಶನಿವಾರ ಮೊದಲ ಬಾರಿಗೆ ತನ್ನ ಹೊಸ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿದೆ.
ಕಿನ್ಝಾಲ್ ಹೈಪರ್‌ಸಾನಿಕ್ ಕ್ಷಿಪಣಿ ಮೂಲಕ ಪಶ್ಚಿಮ ಉಕ್ರೇನ್‌ನ ಇವಾನೋ-ಫ್ರಾಂಕಿಸ್ಕ್ ಪ್ರದೇಶದ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಧ್ವಂಸಗೊಳಿಸಲಾಗಿದೆ.
ಈ ಮೂಲಕ ಉಕ್ರೇನ್ ಯುದ್ಧದಲ್ಲಿ ರಷ್ಯಾವು ಮೊದಲ ಬಾರಿಗೆ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯುವ ಸಾಮರ್ಥ್ಯದ ಸುಧಾರಿತ ಅಸ್ತ್ರವನ್ನು ಬಳಸಿದಂತಾಗಿದೆ.
2018ರಲ್ಲಿ ಪುತಿನ್ ಅನಾವರಣಗೊಳಿಸಿದ್ದ ಹೊಸ ಶಸ್ತ್ರಾಸ್ತ್ರಗಳ ಪೈಕಿ ಕಿನ್ಝಾಲ್ ಕೂಡ ಒಂದು. ಇದು ಶಬ್ದಕ್ಕಿಂತ 10 ಪಟ್ಟು ವೇಗದಲ್ಲಿ ಸಂಚರಿಸುತ್ತಿದ್ದು, ವೈಮಾ ನಿಕ ರಕ್ಷಣ ವ್ಯವಸ್ಥೆಯಿಂದಲೂ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. 1,500-2,000 ಕಿ.ಮೀ.ವ್ಯಾಪ್ತಿ ಹೊಂದಿರುವ ಕಿನಾlಲ್ ಗಂಟೆಗೆ ಗರಿಷ್ಠ 12,350 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು.