Advertisement

ಸಮರ ಸನ್ನದ್ಧವಾದ ರಷ್ಯಾ-ಉಕ್ರೇನ್‌ : ಆತಂಕದಲ್ಲಿ ಭಾರತೀಯ ವಿದ್ಯಾರ್ಥಿಗಳು

11:25 PM Feb 12, 2022 | Team Udayavani |

ಸೋವಿಯತ್‌ ಒಕ್ಕೂಟ ಛಿದ್ರವಾದ ಬಳಿಕ ಪ್ರತ್ಯೇಕವಾಗಿದ್ದ ಹಲವಾರು ದೇಶಗಳು ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ. ಈ ಎಲ್ಲ ರಾಷ್ಟ್ರಗಳು ನ್ಯಾಟೋದ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಮೆರಿಕದ ನೆರಳಿನಲ್ಲಿವೆ. ಇದೀಗ ಉಕ್ರೇನ್‌ ಕೂಡ ನ್ಯಾಟೋದ ಸದಸ್ಯತ್ವವನ್ನು ಪಡೆಯುಲು ಮುಂದಾಗಿರುವುದು ರಷ್ಯಾದ ಕಣ್ಣನ್ನು ಕೆಂಪಗಾಗಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾ, ಉಕ್ರೇನ್‌ ವಿರುದ್ಧ ಸಮರ ಸಾರಲು ಸಜ್ಜಾಗಿದೆ. ಈ ನಡುವೆ ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಮುಂದಾಗಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಣ ಬಿಕ್ಕಟ್ಟು ಶೀಘ್ರ ಶಮನಗೊಳ್ಳದೇ ಹೋದಲ್ಲಿ  ಕೆಲವೇ ದಿನಗಳಲ್ಲಿ ರಣಕಹಳೆ ಮೊಳಗುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳು ಕೇವಲ ಯುದ್ಧ ಸನ್ನದ್ಧ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿವೆ.

Advertisement

ಉಕ್ರೇನ್‌ ಗಡಿಯಲ್ಲಿ  :

ಸೇನೆ ಜಮಾವಣೆ: ಉಕ್ರೇನ್‌ ಗಡಿಯ ಬಳಿ ರಷ್ಯಾ ಭಾರೀ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸುತ್ತಿದ್ದು ಇದು ಲಕ್ಷದ ಗಡಿ ದಾಟಿದೆ. ಅಮೆರಿಕ ಕೂಡ ಉಕ್ರೇನ್‌ನ ನೆರೆಯ ರಾಷ್ಟ್ರ ಪೋಲೆಂಡ್‌ಗೆ ತನ್ನ ಸೇನಾಪಡೆಗಳನ್ನು ರವಾನಿಸಿದೆ. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಯುದ್ದ ಸಾಧ್ಯತೆಯನ್ನು ನಿಚ್ಚಳವಾಗಿಸಿದೆ. ಇದರ ನಡುವೆ ಉದ್ವಿಗ್ನತೆಯನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆಯಾದರೂ ಇತ್ತಂಡಗಳೂ ರಣೋತ್ಸಾಹದಲ್ಲಿವೆ. ಈಗಾಗಲೇ ಉಕ್ರೇನ್‌ನಲ್ಲಿ ಯುದ್ಧ ಸದೃಶ ವಾತಾವರಣವಿದ್ದು ಜನತೆಯಲ್ಲಿ ಭಯ ಮನೆಮಾಡಿದೆ. ಇನ್ನು ಇಲ್ಲಿರುವ ವಿದೇಶಿಯರಂತೂ ಅತಂತ್ರತೆಯ ಭೀತಿ ಎದುರಿಸುತ್ತಿದ್ದಾರೆ.

ವಿದೇಶಗಳಿಂದ ಪ್ರಜೆಗಳಿಗೆ ಎಚ್ಚರಿಕೆ: ಉಕ್ರೇನ್‌ನಲ್ಲಿ ಯುದ್ಧದ ಸಾಧ್ಯತೆ ಹೆಚ್ಚುತ್ತಿರುವಂತೆಯೇ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳಾದ ಬ್ರಿಟನ್‌, ಕೆನಡಾ, ನಾರ್ವೆ, ಡೆನ್ಮಾರ್ಕ್‌ ಸಹಿತ ಐರೋಪ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿರುವ ತಮ್ಮ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಸ್ವದೇಶಕ್ಕೆ ಮರಳುವಂತೆ ಸೂಚನೆ ನೀಡಿವೆ. ಅಷ್ಟು ಮಾತ್ರವಲ್ಲದೆ ಕೆಲವೊಂದು ರಾಷ್ಟ್ರಗಳು ಉಕ್ರೇನ್‌ನಲ್ಲಿನ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಲಾರಂಭಿಸಿವೆ.

ಭಾರತೀಯ ವಿದ್ಯಾರ್ಥಿಗಳಲ್ಲಿ ಮಡುಗಟ್ಟಿದ ಆತಂಕ: ಈ ಎಲ್ಲ ಬೆಳವಣಿಗೆಗಳ ನಡುವೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಕ್ರೇನ್‌ನಲ್ಲಿರುವ ವಿದೇಶಿ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌ ಓದುತ್ತಿರುವ ಸುಮಾರು 18 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇರುವುದರಿಂದ ಭಾರತ ಸರಕಾರ ಅಲ್ಲಿನ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದೆ. ಅಷ್ಟು ಮಾತ್ರವಲ್ಲದೆ ಉಕ್ರೇನ್‌ನ ಆಡಳಿತದೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು ಭಾರತೀಯರ ಸುರಕ್ಷತೆಯ ಮೇಲೆ ಹೆಚ್ಚಿನ ಕಾಳಜಿ ವಹಿಸಿದೆ. ಸದ್ಯ ಉಕ್ರೇನ್‌ನಲ್ಲಿ ನೆಲೆಯಾಗಿರುವ ಭಾರತೀಯರೆಲ್ಲರೂ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಭಾರತ ಸರಕಾರ ಮನವಿ ಮಾಡಿಕೊಂಡಿದೆ. ಉಕ್ರೇನ್‌ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದೇ ಆದಲ್ಲಿ ತನ್ನ ದೇಶದ ಪ್ರಜೆಗಳಿಗೆ ತ್ವರಿತವಾಗಿ ಸ್ಪಂದಿಸಲು ಇದರಿಂದ ಅನುಕೂಲವಾಗಲಿದೆ.

Advertisement

ಉಕ್ರೇನ್‌ನಲ್ಲಿದ್ದಾರೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು :

ಭಾರತದಲ್ಲಿ ಎಂಬಿಬಿಎಸ್‌ ಪದವಿ ಪಡೆದವರಿಗೆ ಉತ್ತಮ ಉದ್ಯೋಗದ ಭರವಸೆ ಇದೆ. ಸದ್ಯ ದೇಶದಲ್ಲಿ ಕೇವಲ 88 ಸಾವಿರ ಎಂಬಿಬಿಎಸ್‌ ಸೀಟುಗಳಿವೆ. ಆದರೆ 2021ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇದರಿಂದ ಪ್ರತೀ ವರ್ಷ 7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ವೈದ್ಯರಾಗುವ ಕನಸು ನನಸಾಗದೆ ಉಳಿಯುತ್ತದೆ. ವೈದ್ಯನಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ  ಭಾರತೀಯ ಯುವಕರು ಉಕ್ರೇನ್‌ ಮತ್ತು ಇತರ ದೇಶಗಳಿಗೆ ತೆರಳುತ್ತಿದ್ದಾರೆ.

ಪದವಿ ಮಾನ್ಯವೇ? :

ಉಕ್ರೇನ್‌ನಂತಹ ದೇಶಗಳಿಂದ ವೈದ್ಯಕೀಯ ಶಿಕ್ಷಣ ಪಡೆದು ಹಿಂದಿರುಗಿದವರಿಗೆ ಭಾರತದಲ್ಲಿ ತತ್‌ಕ್ಷಣ ಅಭ್ಯಾಸ ಮಾಡುವುದು ಕಷ್ಟ. ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳುವ ವೈದ್ಯಕೀಯ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವೀಧರರ  ಪರೀಕ್ಷೆ(ಊMಎಉ)ಗೆ ಹಾಜರಾಗಬೇಕು. ಇದು ತುಂಬಾ ಕಠಿನ ಪರೀಕ್ಷೆಯಾಗಿದ್ದು ಇದರಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಇದಕ್ಕಾಗಿ ಅನೇಕ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಾರೆ. ಯಾಕೆಂದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಅವರು ಭಾರತದಲ್ಲಿ ವೈದ್ಯಕೀಯ ಅಭ್ಯಾಸವನ್ನು ಮಾಡಲು ಸಾಧ್ಯವಿಲ್ಲ. ಅವರಿಗೆ ಪರವಾನಿಗೆಯೂ ಸಿಗುವುದಿಲ್ಲ. ಕಳೆದ 3- 4 ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ವಿದೇಶದಿಂದ ಬರುವ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಕೇವಲ ಶೇ. 25ರಷ್ಟು ಮಂದಿ ಮಾತ್ರ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಉಕ್ರೇನ್‌ನಲ್ಲಿದ್ದಾರೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು :

ಭಾರತದಲ್ಲಿ ಎಂಬಿಬಿಎಸ್‌ ಪದವಿ ಪಡೆದವರಿಗೆ ಉತ್ತಮ ಉದ್ಯೋಗದ ಭರವಸೆ ಇದೆ. ಸದ್ಯ ದೇಶದಲ್ಲಿ ಕೇವಲ 88 ಸಾವಿರ ಎಂಬಿಬಿಎಸ್‌ ಸೀಟುಗಳಿವೆ. ಆದರೆ 2021ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇದರಿಂದ ಪ್ರತೀ ವರ್ಷ 7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ವೈದ್ಯರಾಗುವ ಕನಸು ನನಸಾಗದೆ ಉಳಿಯುತ್ತದೆ. ವೈದ್ಯನಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ  ಭಾರತೀಯ ಯುವಕರು ಉಕ್ರೇನ್‌ ಮತ್ತು ಇತರ ದೇಶಗಳಿಗೆ ತೆರಳುತ್ತಿದ್ದಾರೆ.

ಉಕ್ರೇನ್‌ನಲ್ಲಿ ಶಿಕ್ಷಣ ವೆಚ್ಚ ಅಗ್ಗ :

ಭಾರತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ದುಬಾರಿಯಾಗಿದೆ. ಸುಮಾರು ಒಂದು ಕೋಟಿ ರೂ. ವೆಚ್ಚವಾಗುತ್ತದೆ. ಆದರೆ ಉಕ್ರೇನ್‌ನಂತಹ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೇವಲ 25 ಲಕ್ಷ ರೂ. ಗಳಲ್ಲಿ ಮುಗಿಸಬಹುದು. ಇದು ಭಾರತಕ್ಕೆ ಹೋಲಿಸಿದಲ್ಲಿ ತೀರಾ ಕಡಿಮೆಯಾಗಿದೆ.

ಭಾರತದಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೆಚ್ಚ  ಒಂದು  ಕೋ.ರೂ. ಗಿಂತಲೂ ಅಧಿಕ. ಅಮೆರಿಕದಲ್ಲಿ 7- 8 ಕೋಟಿ ರೂ. ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 40 ಮಿಲಿಯನ್‌ ಆಗಿದೆ. ಇನ್ನು ರಷ್ಯಾ, ಉಕ್ರೇನ್‌, ನೇಪಾಲ, ಚೀನ, ಫಿಲಿಪೈ®Õ… ಅಥವಾ ಬಾಂಗ್ಲಾದೇಶದಲ್ಲಿ ಇದು ಭಾರತದಲ್ಲಿನ ವೈದ್ಯಕೀಯ ವ್ಯಾಸಂಗದ ವೆಚ್ಚದ ಕಾಲು ಭಾಗ ಮಾತ್ರ. ಅಷ್ಟು ಮಾತ್ರವಲ್ಲದೆ ಭಾರತದಂತೆ ವಿದೇಶಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ವ್ಯಾಸಂಗಕ್ಕಾಗಿ ಡೊನೇಶನ್‌ ನೀಡಬೇಕಾಗಿಲ್ಲ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕಾಗಿಲ್ಲ.

ವಿದೇಶದಲ್ಲಿ ಅಧ್ಯಯನಕ್ಕಾಗಿ ತೆರಳಿರುವ ಭಾರತೀಯ ವಿದ್ಯಾರ್ಥಿಗಳು  :

ದೇಶ     / ಸಂಖ್ಯೆ

ಅಮೆರಿಕ             1.3 ಲಕ್ಷ

ಕೆನಡಾ 40 ಸಾವಿರ

ಬ್ರಿಟನ್‌ 25 ಸಾವಿರ

ಆಸ್ಟ್ರೇಲಿಯಾ    25 ಸಾವಿರ

ನ್ಯೂಜಿಲ್ಯಾಂಡ್‌               20 ಸಾವಿರ

ಉಕ್ರೇನ್‌              18 ಸಾವಿರ

ದೇಶ     / ವೈದ್ಯಕೀಯ ಶಿಕ್ಷಣ ವೆಚ್ಚ (ರೂ.ಗಳಲ್ಲಿ)

ಭಾರತ 1 ಕೋಟಿ

ಅಮೆರಿಕ             8 ಕೋಟಿ

ಆಸ್ಟ್ರೇಲಿಯಾ    4 ಕೋಟಿ

ಬ್ರಿಟನ್‌ 4 ಕೋಟಿ

ನ್ಯೂಜಿಲ್ಯಾಂಡ್‌               4 ಕೋಟಿ

ಕೆನಡಾ 4 ಕೋಟಿ

ಉಕ್ರೇನ್‌              24 ಲಕ್ಷ

 

ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next