Advertisement

ಭಾರತದ ಬ್ಯಾಂಕ್‌ಗಳಲ್ಲಿ ರಾಶಿ ಬಿದ್ದಿದೆ ರಷ್ಯಾದ “ರೂಪಾಯಿಗಳು’

12:51 AM May 09, 2023 | Team Udayavani |

ಪಣಜಿ: ಭಾರತದ ಬ್ಯಾಂಕ್‌ಗಳಲ್ಲಿ ರಷ್ಯಾಕ್ಕೆ ಸೇರಿದ ಭಾರೀ ಮೊತ್ತ ಜಮೆಯಾಗಿದೆ. ಆದರೆ ಅದನ್ನು ನಾವು ಬಳಸುವ ಸ್ಥಿತಿಯಲ್ಲಿಲ್ಲ… ಹೀಗೆಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್‌ ಲಾವ್ರೋವ್‌ ಹೇಳಿದ್ದಾರೆ.

Advertisement

ಶಾಂಘಾಯ್‌ ಸಹಕಾರ ಸಮಾವೇಶದ ಅನಂತರ ಅವರು ಮಾಧ್ಯಮಗಳಿಗೆ ಮೇಲಿನಂತೆ ಮಾಹಿತಿ ನೀಡಿದ್ದಾರೆ. ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದ ಅನಂತರ ಪಾಶ್ಚಾತ್ಯ ರಾಷ್ಟ್ರಗಳು ಅದರ ಮೇಲೆ ಭಾರೀ ನಿರ್ಬಂಧ ಹೇರಿದವು. ಹಾಗಾಗಿ ರಷ್ಯಾ ಬ್ಯಾಂಕ್‌ಗಳು, ಸಂದೇಶದ ಮೂಲಕ ಹಣ ಕಳಿಸುವ ವ್ಯವ ಸ್ಥೆಯೂ ನಿರ್ಬಂಧಕ್ಕೊಳಗಾದವು. ಇದೇ ವೇಳೆ ಭಾರತ ರಷ್ಯಾದಿಂದ ಭಾರೀ ಪ್ರಮಾಣ ದಲ್ಲಿ ತೈಲ ಆಮದು ಆರಂಭಿಸಿತು.

ಆದರೆ ಹಣವನ್ನು ರಷ್ಯಾದ ರೂಬಲ್‌ನಲ್ಲಿ ಕೊಡಲು ಸಾಧ್ಯವಿಲ್ಲವಾಗಿದೆ. ಹೀಗಾಗಿ ರೂಪಾಯಿಯಲ್ಲೇ ಭಾರತೀಯ ಬ್ಯಾಂಕ್‌ಗಳಿಗೆ ಹಣ ಹಾಕಲು ಆರಂಭಿಸಲಾಯಿತು. ಹೀಗೆ ರಾಶಿಬಿದ್ದಿರುವ ಹಣವನ್ನು ಬೇರೆ ಕರೆನ್ಸಿಗಳಿಗೆ ಪರಿವರ್ತಿಸಿ ರಷ್ಯಾ ಪಡೆಯಬೇಕಿದೆ. ಇದನ್ನೇ ರಷ್ಯಾ ಸಚಿವರು ಹೇಳಿರುವುದು!

Advertisement

Udayavani is now on Telegram. Click here to join our channel and stay updated with the latest news.

Next