Advertisement

ರಷ್ಯಾ ಅಧ್ಯಕ್ಷರಿಗೆ ಈಗ ನಿಲ್ಲಲೂ ಕಷ್ಟ? ಪುತಿನ್‌ ಆರೋಗ್ಯದ ಬಗ್ಗೆ ಮತ್ತೊಂದು ವರದಿ

11:21 AM Jun 16, 2022 | Team Udayavani |

ವಾಷಿಂಗ್ಟನ್‌: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅವರ ಆರೋಗ್ಯದ ಬಗ್ಗೆ ಪಾಶ್ಚಿಮಾತ್ಯ ಮತ್ತು ಐರೋಪ್ಯ ಒಕ್ಕೂಟದ ಕೆಲವು ಮಾಧ್ಯಮಗಳಲ್ಲಿ ಸಂಶ ಯಾತ್ಮಕವಾದ ವರದಿಗಳು ಪ್ರಕಟವಾಗುತ್ತಿವೆ.

Advertisement

ಅದಕ್ಕೆ ಸೇರ್ಪಡೆ ಎಂಬಂತೆ ವರದಿಯೊಂದು ಪ್ರಕಟ ವಾಗಿದೆ. ಅದರ ಪ್ರಕಾರ ಪುತಿನ್‌ ಅವರಿಗೆ ನಿಂತುಕೊಂಡು ಮಾತನಾಡಲು ಅಸಾಧ್ಯವಾಗುತ್ತಿದೆ. ಕಳೆದ ರವಿವಾರ (ಜೂ.12) ನಡೆದಿದ್ದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೀಡಿಯೋದಲ್ಲಿ ಭಾಷಣ ಮಾಡುತ್ತಿರಬೇಕಾದರೆ, ಅವರ ಕಾಲುಗಳು ನಡುಗುತ್ತಿದ್ದದ್ದು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಪುತಿನ್‌ ಅವರಿಗೆ ಹೆಚ್ಚಿನ ಸಮಯದ ವರೆಗೆ ನಿಂತುಕೊಂಡು ಭಾಷಣ ಮಾಡುವ ಕಾರ್ಯಕ್ರಮಗಳಲ್ಲಿ ಮಾತನಾಡುವುದು ಬೇಡ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಆ ವರದಿಯಲ್ಲಿ ಉಲ್ಲೇಖೀ ಸಲಾಗಿದೆ.

ರಷ್ಯಾ ಸಂಸತ್‌ ಕ್ರೆಮ್ಲಿನ್‌ ವಿರೋಧಿಗಳು ಹೊಂದಿರುವ ಟೆಲಿಗ್ರಾಂ ಚಾನೆಲ್‌ ಮೂಲಕ ಬಂದಿರುವ ವೀಡಿಯೋ ಆಧರಿಸಿ ಈ ಅಂಶವನ್ನು ವರದಿ ಮಾಡಲಾಗಿದೆ. ಫೆ.24ರ ಬಳಿಕ ಉಕ್ರೇನ್‌ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ರೀತಿಯ ವರದಿಗಳು ಪ್ರಕಟವಾಗಿದೆ. ಈ ಪೈಕಿ ಒಂದರಲ್ಲಿ ಪುತಿನ್‌ ಅವರಿಗೆ ಈಗಾಗಲೇ ಕ್ಯಾನ್ಸರ್‌ ಇದೆ ಎಂದೂ ಹೇಳಿಕೊಳ್ಳಲಾಗಿತ್ತು. ಆದರೆ ಈ ಬಗ್ಗೆ ರಷ್ಯಾ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next