Advertisement

ಲ್ಯಾಂಡಿಂಗ್‌ ವೇಳೆ ರಷ್ಯಾ ವಿಮಾನ ಪತನ : ವಿಮಾನದಲ್ಲಿದ್ದ 28 ಮಂದಿ ಸಾವು

09:04 PM Jul 06, 2021 | Team Udayavani |

ಮಾಸ್ಕೋ: ಪ್ರತಿಕೂಲ ಹವಾಮಾನದ ನಡುವೆಯೂ ಲ್ಯಾಂಡಿಂಗ್‌ಗೆ ಯತ್ನಿಸಿದ ರಷ್ಯಾದ ವಿಮಾನವೊಂದು ಮಂಗಳವಾರ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ 28 ಮಂದಿಯೂ ಸಾವಿಗೀಡಾಗಿದ್ದಾರೆ.

Advertisement

ಪಲಾನಾ ನಗರದ ಏರ್‌ ಪೋರ್ಟ್‌ ಸಮೀಪವೇ ಆ್ಯಂಟೊನೋವ್‌ ಆ್ಯನ್‌-26 ವಿಮಾನದ ಕೆಲವು ಅವಶೇಷಗಳು ಪತ್ತೆಯಾಗಿವೆ. ದಟ್ಟ ಹಿಮ ಹಾಗೂ ಮೋಡಗಳ ನಡುವೆಯೇ ಲ್ಯಾಂಡಿಂಗ್‌ಗೆ ಯತ್ನಿಸುವಾಗ ರೇಡಾರ್‌ನ ಸಂಪರ್ಕ ಕಡಿದುಕೊಂಡು ವಿಮಾನ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಕೆಲವು ಅವಶೇಷ ಏರ್‌ ಪೋರ್ಟ್‌ನ ರನ್‌ವೇಯಿಂದ 5 ಕಿ.ಮೀ. ದೂರದಲ್ಲಿ ಪತ್ತೆಯಾದರೆ, ಇನ್ನೂ ಕೆಲವು ಅವಶೇಷಗಳು ಓಖೋಸ್ಕ್ ಸಮುದ್ರಕ್ಕೆ ಬಿದ್ದಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಸಂಪುಟ ಲೆಕ್ಕಾಚಾರ : ಒಬಿಸಿ ಸೇರಿದ 24 ಮಂದಿಗೆ ಸಚಿವ ಸ್ಥಾನ ನೀಡುವ ಯೋಜನೆಯಲ್ಲಿ ಮೋದಿ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next