Advertisement

ರಷ್ಯಾಗೆ ಐರೋಪ್ಯ ಒಕ್ಕೂಟದಿಂದ ಕಠಿಣ ನಿರ್ಬಂಧ!

07:13 PM Feb 25, 2023 | Team Udayavani |

ಬ್ರಸೆಲ್ಸ್‌ : ಒಂದು ವರ್ಷ ಕಳೆದರೂ, ಉಕ್ರೇನ್‌ ಮೇಲಿನ ರಷ್ಯಾ ದಾಳಿ ಹೆಚ್ಚುತ್ತಲೇ ಇದ್ದು, ರಷ್ಯಾವನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹಿಂದೆಂದಿಗಿಂತಲೂ ಕಠಿಣ ನಿರ್ಬಂಧಗಳನ್ನು ವಿಧಿಸಲು ಐರೋಪ್ಯ ಒಕ್ಕೂಟ ಶನಿವಾರ ನಿರ್ಧರಿಸಿದೆ.

Advertisement

ಆರ್ಥಿಕವಾಗಿ ಮಾತ್ರವಲ್ಲದೇ, ರಕ್ಷಣಾತ್ಮಕವಾಗಿಯೂ ರಷ್ಯಾವನ್ನು ಸದೆಬಡಿಯಲು ಒಕ್ಕೂಟ ತಯಾರಿ ನಡೆಸಿದೆ.
ಈ ಕುರಿತು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮಾಹಿತಿ ನೀಡಿದ್ದು, ಉಕ್ರೇನ್‌ ಮೇಲಿನ ದಾಳಿ ಬೆಂಬಲಿಸುವ, ರಷ್ಯಾ ಪರ ಪ್ರಚಾರ ಮಾಡುವ, ರಷ್ಯಾಗೆ ಆರ್ಥಿಕ ಅಥವಾ ರಾಜಕೀಯ ಹಾಗೂ ರಕ್ಷಣಾ ನೆರವು ನೀಡುವ, ಸಶಸ್ತ್ರಗಳನ್ನು ಸರಬರಾಜು ಮಾಡುವ ಎಲ್ಲ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಕಠಿಣ ನಿರ್ಬಂಧ ವಿಧಿಸಲು ಒಕ್ಕೂಟ ಸಮ್ಮತಿಸಿದೆ ಎಂದಿದ್ದಾರೆ. ಅಲ್ಲದೇ, ರಷ್ಯಾದ ಬ್ಯಾಂಕ್‌ಗಳ ಜತೆಗಿನ ವಹಿವಾಟು ಸ್ಥಗಿತಗೊಳಿಸುವುದಲ್ಲದೇ, ಐರೋಪ್ಯ ರಾಷ್ಟ್ರಗಳಲ್ಲಿರುವ ರಷ್ಯಾ ಸಂಸ್ಥೆಗಳ ಆಸ್ತಿ ಮುಟ್ಟುಗೋಲಿನಂಥ ನಿರ್ಬಂಧ ವಿಧಿಸಲು ಯೋಜಿಸಿವೆ ಎನ್ನಲಾಗಿದೆ.

ಜಿ-7 ರಾಷ್ಟ್ರಗಳಿಂದಲೂ ಕ್ರಮ: ರಷ್ಯಾ ವಿರುದ್ಧ ಜಿ-7ರಾಷ್ಟ್ರಗಳ ವಚ್ಯುವಲ್‌ ಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಯಾವುದೇ ಶಸ್ತ್ರಾಸ್ತ್ರ ರಫ್ತು ಮಾಡದಂತೆ ಸದಸ್ಯ ರಾಷ್ಟ್ರಗಳು ನಿರ್ಧರಿಸಿವೆ. ಇದೇ ವೇಳೆ ಆರ್ಥಿಕವಾಗಿ ಹಾಗೂ ರಕ್ಷಣಾತ್ಮಕವಾಗಿ ಉಕ್ರೇನ್‌ಗೆ ನಮ್ಮ ಬೆಂಬಲ ವಿಸ್ತರಿಸಲು ಬದ್ಧವಾಗಿದ್ದೇವೆ ಎಂದು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next