Advertisement

ರಾಜತಾಂತ್ರಿಕ ಸೂತ್ರಕ್ಕೆ ರಷ್ಯಾ ಒತ್ತು

08:55 AM Sep 06, 2017 | Harsha Rao |

ಕ್ಸಿಯಾಮೆನ್‌: ಹೈಡ್ರೋಜನ್‌ ಬಾಂಬ್‌ ಪರೀಕ್ಷಿಸಿ ಜಾಗತಿಕ ಚರ್ಚೆಗೆ ಕಾರಣವಾಗಿರುವ ಉತ್ತರ ಕೊರಿಯಾವನ್ನು ಬಗ್ಗುಬಡಿಯುವ ವಿಚಾರದಲ್ಲಿ ಬಲಿಷ್ಠ ದೇಶಗಳ ನಡುವೆಯೇ ಭಿನ್ನಮತ ಶುರುವಾಗಿದೆ.

Advertisement

ಉ.ಕೊರಿಯಾಗೆ ಹಲವು ನಿರ್ಬಂಧಗಳನ್ನು ಹೇರುವ ಮೂಲಕ ಕ್ರಮ ಕೈಗೊಳ್ಳಲು ಅಮೆರಿಕ ಯತ್ನಿಸುತ್ತಿದ್ದರೆ, ಚೀನಾ ಮತ್ತು ರಷ್ಯಾ ಇದನ್ನು ವಿರೋಧಿಸಿವೆ. ಈ ಕುರಿತು ಮಂಗಳವಾರ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, “ನಿರ್ಬಂಧ ಹೇರುವುದರಿಂದ ಯಾವುದೇ ಪ್ರಯೋಜನ ವಿಲ್ಲ. ಈ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಜಾಗತಿಕ ದುರಂತ ವನ್ನು ಎದುರಿಸಬೇಕಾದೀತು’ ಎಂದಿದ್ದಾರೆ. ಜತೆಗೆ, ಅಮೆರಿಕ ಕ್ರಮದ ಬಗ್ಗೆ ಆಕ್ಷೇಪ ಎತ್ತಿರುವ ಅವರು, ಪ್ಯಾಂಗ್‌ಯಾಂಗ್‌ ಅನ್ನು ನಿಯಂತ್ರಿಸಬೇಕೆನ್ನುವ ಕಾರಣಕ್ಕಾಗಿ ಅನಗತ್ಯ ವಿಭಜಿಸುವ ಕ್ರಮ ಸರಿಯಲ್ಲ ಎಂದಿದ್ದಾರೆ.

ನಮಗಿಂತಲೂ ಬಲಿಷ್ಠ ಬಾಂಬ್‌: ಉತ್ತರ ಕೊರಿಯಾ ಪರೀಕ್ಷಿಸಿದ ಹೈಡ್ರೋಜನ್‌ ಬಾಂಬ್‌ ಪಾಕಿಸ್ತಾನದ ಬಳಿ ಇರುವ ಪರಮಾಣು ಬಾಂಬ್‌ಗಳಿಗಿಂತಲೂ ಸಾಕಷ್ಟು ಬಲಿಷ್ಠವಾದುದು. ಅಂತಹ ಬಾಂಬ್‌ಗಳನ್ನು ಸಿದ್ಧಪಡಿಸುವ ಶಕ್ತಿ ಆ ದೇಶಕ್ಕಿದೆ ಎಂದು ಪಾಕಿಸ್ತಾನದ ಪರಮಾಣು ಪಿತಾಮಹ, ವಿಜ್ಞಾನಿ ಡಾ.ಅಬ್ದುಲ್‌ ಖಾದೀರ್‌ ಹೇಳಿದ್ದಾರೆ. ಈ ವಿಚಾರದಲ್ಲಿ ಇಸ್ಲಾಮಾಬಾದ್‌ಗೆ ಪ್ಯಾಂಗ್‌ಯಾಂಗ್‌ ಅನ್ನು ಮೀರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next