Advertisement
ಏನಿದು ಎಕೆ-203?2ನೇ ವಿಶ್ವಯುದ್ಧ ವೇಳೆ ಬ್ರಹ್ಮಾಸ್ತ್ರದಂತೆ ಬಳಕೆಯಾದ ಬಂದೂಕು ಎಕೆ-47. ಇದರ ನಿರ್ಮಾತೃ, ರಷ್ಯಾದ ಮಿಖಾಯಿಲ್ ಕಲಾಶ್ನಿಕೋವ್ “ಎಕೆ-203′ ಬಂದೂಕನ್ನೂ ವಿನ್ಯಾಸಗೊಳಿಸಿದ. ಅತ್ಯಂತ ಚುರುಕು, ತೀಕ್ಷ್ಣ ದಾಳಿಗೆ ಹೇಳಿಮಾಡಿಸಿದಈರೈಫಲ್‌ಗೆ ಜಗತ್ತಿನಲ್ಲಿ ಭಾರೀ ಬೇಡಿಕೆಯಿದೆ.
“ಎಕೆ- 203′ ರೈಫಲ್‌ಗಳನ್ನು ರಷ್ಯನ್ ತಂತ್ರಜ್ಞಾನದ ಸಹಕಾರದಲ್ಲಿ ದೇಶೀಯವಾಗಿ ಉತ್ಪಾದಿಸಲು ಕಳೆದ 1 ವರ್ಷದಿಂದ ಮಾತುಕತೆ ನಡೆಯುತ್ತಿತ್ತು. 5,125 ಕೋಟಿ ರೂ. ವೆಚ್ಚದ ಒಪ್ಪಂದಕ್ಕೆ ರಷ್ಯಾ ಸಮ್ಮತಿ ಸೂಚಿಸಿದೆ. ಎಲ್ಲಿ ಉತ್ಪಾದನೆ?
ಉತ್ತರ ಪ್ರದೇಶದ ವಿಇಪಿ ಲೋಕಸಭಾಕ್ಷೇತ್ರವೊಂದರ ಕಾರ್ಖಾನೆಯಲ್ಲಿ ಉತ್ಪಾದನೆ ನಡೆಯಲಿದೆ. ಇಂಡೋ ರಷ್ಯನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಅಡಿಯಲ್ಲಿ,ಕೆಲವೇ ವರ್ಷಗಳಲ್ಲಿ6 ಲಕ್ಷ ರೈಫಲ್‌ಗಳು ಉತ್ಪಾದನೆಗೊಳ್ಳಲಿವೆ.
Related Articles
ಭಾರತೀಯ ಯೋಧರ ಬಳಿ ಈಗಾಗಲೇ ಎಕೆ- 203 ಸುಧಾರಿತ ದಾಳಿ ರೈಫಲ್‌ಗಳಿವೆ. ಸದ್ಯಕ್ಕೆ ಇದರ ಅವಶ್ಯಕತೆ ಇರುವುದು ಸಿಆರ್‌ಪಿಎಫ್ ನಂಥಕೇಂದ್ರೀಯ ಪೊಲೀಸ್ ಪಡೆಗೆ. ದೇಶದ ಆಂತರಿಕ ಭದ್ರತೆಗೆ ಶ್ರಮಿಸುತ್ತಿರುವ ಕೇಂದ್ರೀಯ ಪಡೆಗಳು ಇದರ ಪ್ರಯೋಜನ ಲಭಿಸಲಿದೆ.
Advertisement