Advertisement
ಈ ಕುರಿತು ರಷ್ಯಾದ ಆರೋಗ್ಯ ಸಚಿವಾಲಯವು ಪ್ರಸ್ತಾವನೆಯನ್ನು ರೂಪಿಸಿದೆ. ಆದರೆ ಈ ಯೋಜನೆ ತಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಹೊಸ ಕಾಯ್ದೆ 2033ಕ್ಕೆ ಜಾರಿಗೆ ಬರಲಿದೆ. ಸದ್ಯ 18 ವರ್ಷ ಪೂರೈಸದ ಯಾವುದೇ ವ್ಯಕ್ತಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನ ಮಾರುವಂತಿಲ್ಲ ಎಂಬ ನಿಯಮ ಇದೆ. ಜೊತೆಗೆ ಇದೀಗ ರೂಪಿಸಲು ಉದ್ದೇಶಿಸಿರುವ ನಿಯಮದ ಅನ್ವಯ 2015ರಲ್ಲಿ ಹುಟ್ಟಿದ ಮಗುವಿಗೆ 2033ರಲ್ಲಿ 18 ವರ್ಷ ತುಂಬುತ್ತದೆ. ಆಗ ಅ ವ್ಯಕ್ತಿಗೆ ಯಾರು ಕೂಡ ಸಿಗರೆಟ್ ಅನ್ನು ಮಾರಾಟ ಮಾಡುವಂತಿಲ್ಲ. ಇದು ಯಶಸ್ವಿಯಾದರೆ ವಿಶ್ವದಲ್ಲಿ ರಷ್ಯಾ ತಂಬಾಕು ಅನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ದೇಶ ಎಂಬ ಹೆಗ್ಗಳಿಗೆ ಪಾತ್ರವಾಗಲಿದೆ. Advertisement
ರಷ್ಯಾ: 2015ರ ಬಳಿಕ ಜನಿಸಿದವವರಿಗೆ ಸಿಗರೇಟ್ ಬ್ಯಾನ್
03:45 AM Jan 13, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.