Advertisement

“ಹಳ್ಳಿ ಜೀವನ ಪದ್ಧತಿ, ಕೃಷಿಯತ್ತ ಆಕರ್ಷಿಸಲು ಗ್ರಾಮೀಣ ಕ್ರೀಡೆ ಪೂರಕ’

08:27 PM Jul 29, 2019 | Sriram |

ಪೆರ್ಲ: ಪರಂಪರಾಗತ ಭತ್ತದ ಬೇಸಾಯ,ಹಳ್ಳಿ ಜನರ ಜೀವನ ಪದ್ದತಿ,ಕೃಷಿಯತ್ತ ಯುವ ತಲೆಮಾರನ್ನು ಆಕರ್ಷಿಸಲು ಗ್ರಾಮೀಣ ಭಾಗದಲ್ಲಿ ರೈತರ ಕಾಯಕಭೂಮಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯ ಎಂದು ಎಣ್ಮಕಜೆ ಗ್ರಾ.ಪಂ.ಕ್ಷೇ.ಕಾ.ಸ್ಥಾ .ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ.ಹೇಳಿದರು.

Advertisement

ಅವರು ಸ್ವರ್ಗ ವಾರ್ಡು ಕುಟುಂಬಶ್ರೀ ಎಡಿಎಸ್‌ ನೇತೃತ್ವದಲ್ಲಿ ಎಂ.ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ಮಾತೃಭೂಮಿ ಸ್ವರ್ಗ ಇವುಗಳ ಸಹಯೋಗದಲ್ಲಿ ಬಜಕ್ಕುಡೆ ಕೊರಗಪ್ಪ ನಾಯ್ಕ ಅವರ ಬಯಲುಗದ್ದೆಯಲ್ಲಿ ಜು.28ರಂದು ನಡೆದ :‡ ಕೆಸರು ಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಹಲವು ಸಂಪ್ರದಾಯಗಳು,ಆಚಾರ ವಿಚಾರಗಳು ನಮ್ಮಿಂದ ದೂರವಾಗುತ್ತಿವೆ.ಸಾವಯವ ಕೃಷಿ ಪದ್ಧತಿಗಳ ಬದಲಾಗಿ ವಿಷಯುಕ್ತ ಆಹಾರವಸ್ತುಗಳನ್ನು ಸೇವಿಸುವ ಪರಿಸ್ಥಿತಿ.ಹಡಿಲು ಬಿದ್ದ ಗದ್ದೆಗಳು.ನಮಗೆ ಹಿರಿಯರು ನೀಡಿದ ಕೃಷಿ ರೀತಿಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ತಿಳಿಸುವ ಜವಾಬಾœರಿ ನಮ್ಮದು. ಮಕ್ಕಳು ಹಳ್ಳಿ ಆಟಗಳಿಂದ ದೂವಾಗಿ ಮೊಬೈಲ್‌ ಗೇಮ್‌ಗಳನ್ನು ಇಷ್ಟಪಡುತ್ತಾರೆ.ಯುವಜನಾಂಗ ಆಧುನಿಕ ಜೀವನ,ಫಾಸ್ಟ್‌ ಫುಡ್‌ಗಳು ಮೊದಲಾದವುಗಳಿಂದ ಆರೋಗ್ಯ ಕೆಡಿಸಿಕೊಳ್ಳುತ್ತಾರೆ.ಕೃಷಿಯೆಡೆಗೆ ಯುಜನತೆಯನ್ನು ಆಕರ್ಷಿಸಿಸಲು, ನಮ್ಮ ಬಾಲ್ಯದ ಗ್ರಾಮೀಣ ಆಟಗಳನ್ನು ಮಕ್ಕಳಿಗೆ ಪರಿಚಯಿಸಲು,ಅರಿವನ್ನುಂಟುಮಾಡಲು ಇಂತಹ ಕಾರ್ಯಕ್ರಮ ಅನಿವಾರ್ಯ ಎಂದರು.

ಎಣ್ಮಕಜೆ ಪಂ.ಸಿಡಿಎಸ್‌ ಉಪಾಧ್ಯಕ್ಷೆ ಶಶಿಕಲಾ ಕೆ.ಅಧ್ಯಕ್ಷತೆ ವಹಿಸಿ ಮಾತನಾಡಿ,ನಾಡಿನ ಜನರಿಗೆ ಹಿಂದಿನಕಾಲದ ಕೃಷಿಯು ಶ್ರಮದಾಯಕ ವಾಗಿತ್ತು.ಆದರೂ ಅಂದಿನ ಜನರು ರೈತಬದುಕನ್ನು ಪ್ರೀತಿಸುತ್ತಿದ್ದರು.ಆದರೆ ಇಂದು ಆಧುನಿಕ ಶ್ರಮ ಕಡಿಮೆ ಮಾಡುವ ಉಪಕರಣಗಳು ಬಂದಿದ್ದರೂ ಯುವಜನಾಂಗ ಕೃಷಿಯಿಂದ ದೂರಸರಿಯುತ್ತಿದ್ದಾರೆ.ಅವರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮಗಳು ಆಚರಣೆಯಾಗಲಿ ಎಂದು ಹೇಳಿದರು.

ಪಂ.ಕುಟುಂಬಶ್ರೀ ಮೆಂಬರ್‌ ಕಾರ್ಯದರ್ಶಿ ಅಬ್ದುಲ್‌ ಲತೀಫ್‌,ಮಂ.ತಾ.ಲೈಬ್ರರಿ ಸಮಿತಿ ಸದಸ್ಯ ಶಿಕ್ಷಕ ಉದಯಸಾರಂಗ್‌,ಎಂಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಅಧ್ಯಕ್ಷ ರವಿರಾಜ್‌ ಸ್ವರ್ಗ,ಮಾತೃಭೂಮಿ ಸ್ವರ್ಗ ಇದರ ಅಧ್ಯಕ್ಷ ಸುಬ್ಬಣ್ಣ ಸಿಎಚ್‌,ಕೃಷಿಕ ಪಿ.ಎಸ್‌ ಕಡಂಬಳಿತ್ತಾಯ ಪಂಬೆತ್ತಡ್ಕ ಶುಭಹಾರೈಸಿದರು.
ರೈತರಿಗೆ ಸಮ್ಮಾನ ವಿಶೇಷ.

Advertisement

ಹಿರಿಯ ಪ್ರಗತಿಪರ ಕೃಷಿಕ,ಭತ್ತದ ಬೇಸಾಯಗಾರ ಕೊರಗಪ್ಪ ನಾಯ್ಕ ಬಜಕ್ಕುಡೆ ಅವರನ್ನು ಪಿಎಸ್‌ ಕಡಂಬಳಿತ್ತಾಯ ಹಾಳೆ ಮುಟ್ಟಾಳೆ ತೊಡಿಸಿ,ಕೃಷಿ ಉಪಕರಣ ಹಾರೆ ನೀಡಿ ಸಮ್ಮಾನಿಸಿ ಗೌರವಿಸಿದರು.ಸಿಂಚನ,ಶಿವಾನಿ ಪ್ರಾರ್ಥನೆಹಾಡಿದರು. ì ಎಡಿಎಸ್‌ ಕಾರ್ಯದರ್ಶಿ ಪ್ರೇಮ ಚೆನ್ನುಮೂಲೆ ಸ್ವಾಗತಿಸಿದರು.ಆಶಾ ಕಾರ್ಯಕರ್ತೆ ಚಂದ್ರಾವತಿ ಎಟಿ ವಂದಿಸಿ ಗ್ರಂಥಾಲಯ ಕಾರ್ಯದರ್ಶಿ ರಾಮಚಂದ್ರ ಎಂ ನಿರೂಪಿಸಿದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ ನಡೆಯಿತು ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿಯವರ ಅಧ್ಯಕ್ಷತೆಯಲ್ಲಿ ಪಂ.ಉಪಾಧ್ಯಕ್ಷ ಅಬೂಬಕ್ಕರ್‌ ಸಿದ್ದಿಕ್‌ ಖಂಡಿಗೆ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.ಸಿಡಿಎಸ್‌ ಉಪಾಧ್ಯಕ್ಷೆ ಶಶಿಕಲಾ ಕೆ,ಕೊರಗಪ್ಪ ನಾಯ್ಕ ಮೊದಸಾದವರು ಉಪಸ್ಥಿತರಿದ್ದರು.ರವಿ ವಾಣೀನಗರ ಅವರು ಸ್ವಾಗತಿಸಿದರು. ರಾಮಚಂದ್ರ ಎಂ. ಅವರು ವಂದಿಸಿದರು.

ಕೆಸರುಗದ್ದೆಯಲ್ಲಿ ಜನರ ಗಮನ ಸೆಳೆದ ಆಟೋಟ ಸ್ಪರ್ಧೆಗಳು
ಕೆಸರುಗದ್ದೆಯಲ್ಲಿ ಮಕ್ಕಳಿಗೆ ಹಾಗೂ ಯುವಕ ಯುವತಿಯರಿಗೆ ಬಲೂನ್‌ ಒಡೆಯುವುದು,ಓಟ ಸ್ಪರ್ಧೆ,ಲಿಂಬೆಚಮಚ,ಹಗ್ಗಜಗ್ಗಾಟ,ರಿಲೇ ಓಟ ಮೊದಲಾದ ಸ್ಪರ್ಧೆಗಳು ಜರಗಿದವು.ಮಕ್ಕಳಿಂದ ತೊಡಗಿ ಹಿರಿಯರು ಕೂಡ ಬಹಳ ಉತ್ಸಾಹದಿಂದ ಆಡಿನಲಿದು ಕೆಸರಿನಲ್ಲಿ ಮಿಂದೆದ್ದರು.ಹಳ್ಳಿಯ ಜನರಿಗೆ ಇದು ಹಬ್ಬದ ವಾತಾವರಣ ಉಂಟುಮಾಡಿತ್ತು. ಅತಿಥಿಗಳನ್ನು ಸಾಂಪ್ರದಾಯಕ ಶೈಲಿಯಾದ ವೀಳ್ಯದೆಲೆ,ಅಡಿಕೆ ನೀಡಿ ಸ್ವಾಗತಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next