Advertisement
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿದ್ದ ಗ್ರಾ.ಪಂ.ಗಳ ಗ್ರಂಥಾಲಯಗಳನ್ನು 2019ರಲ್ಲಿ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿತ್ತು. ಇಲಾಖೆ ಬದಲಾದರೂ ವೇತನ ಮಾತ್ರ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಮೂರು ತಿಂಗಳಿನಿಂದಂತೂ ಹಿಂದೆ ಸಿಗುತ್ತಿದ್ದ ವೇತನ ಬಂದಿಲ್ಲ.
Related Articles
Advertisement
ಉಡುಪಿಯಲ್ಲಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ ಒಟ್ಟು 155 ಸಾರ್ವಜನಿಕ ಹಾಗೂ 8 ನಗರ ಕೇಂದ್ರಗಳಲ್ಲಿ ಗ್ರಂಥಾಲಯಗಳಿವೆ. ಅವುಗಳಲ್ಲಿ ಗ್ರಾಮೀಣ ಗ್ರಂಥಾಯಲಗಳ ಸಂಖ್ಯೆಯೇ 141. ದ.ಕ.ದಲ್ಲಿ 204 ಗ್ರಾಮೀಣ ಗ್ರಂಥಾಲಯಗಳಿದ್ದು, 7 ಸಾರ್ವಜನಿಕ, 4 ಕೊಳಚೆಗೇರಿ ಪ್ರದೇಶ ಹಾಗೂ 2 ಅಲೆಮಾರಿ ಪ್ರದೇಶದಲ್ಲಿ ಸೇರಿ ಒಟ್ಟು 217 ಗ್ರಂಥಾಲಯಗಳಿವೆ.
ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರು ಅಥವಾ ಗ್ರಂಥಪಾಲಕರ ಬದುಕು ಸಂಕಷ್ಟದಲ್ಲಿದೆ. ಜೂನ್‌ನಿಂದ ಮಾಸಿಕ ವೇತನ ಏರಿಕೆಯಾಗಿದ್ದರೂ ಪಾವತಿಯಾಗಿಲ್ಲ. ಇದನ್ನೇ ನಂಬಿಕೊಂಡು ನಾವು ಜೀವನ ಸಾಗಿಸುತ್ತಿರುವುದರಿಂದ ತುಂಬಾ ಕಷ್ಟವಾಗುತ್ತಿದೆ. ಪ್ರತೀ ತಿಂಗಳ ಕೊನೆಗೆ ಈ ಹಣ ಪಾವತಿಯಾದರೇ ತುಂಬಾ ಅನುಕೂಲವಾಗುತ್ತದೆ.– ಸುರೇಶ್, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ
ಶೀಘ್ರ ಪಾವತಿಗೆ ಕ್ರಮ:
ಗ್ರಾಮೀಣ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನವನ್ನು ಹೆಚ್ಚಿಸಲಾಗಿದೆ. 3 ತಿಂಗಳಿನಿಂದ ಪಾವತಿಯಾಗದಿರುವ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗನೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವೆ.– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ