ಆಡುವಂತಹ ಆಟ. ಈ ಆಟದಲ್ಲಿ ಆಡುವವರ ಜೊತೆಗೆ ಒಬ್ಬರು ಕಂಟ್ರೋಲರ್ ಕೂಡ ಇರಲೇಬೇಕು. ಒಂದು ಉದ್ದನೆಯ ಅಡ್ಡ ಗೆರೆ ಎಳೆದು ಗೆರೆಯ ಒಂದು ಬದಿಯನ್ನು ಕೆರೆ, ಇನ್ನೊಂದು ಬದಿಯನ್ನು ದಂಡೆ ಎಂದು ಗುರುತಿಸಬೇಕು. ಆಟಗಾರರನ್ನು ಗೆರೆಯ ಮೇಲೆ ನಿಲ್ಲಿಸಬೇಕು. ನಂತರ, ಈ ಆಟದ ಕಂಟ್ರೋಲರ್ ಅಥವಾ ನಿರ್ವಾಹಕರು ರೆಡೀ ಎಂದು ಹೇಳಿ, ಮುಂದೆ ನಿಂತು, ಕೆರೆ,
ದಂಡೆ ಎಂದು ಹೇಳಬೇಕು. ನಿರ್ವಾಹಕರು ಕೆರೆ ಎಂದಾಗ, ಕೆರೆಯ ಬದಿಗೂ, ದಂಡೆ ಎಂದಾಗ ದಂಡೆಯ ಬದಿಗೂ ಆಟಗಾರರು
ಜಿಗಿಯಬೇಕು.
Advertisement
ಮೊದಮೊದಲೂ ನಿಧಾನವಾಗಿ ಸೂಚನೆ ನೀಡುತ್ತಾ, ನಂತರ ವೇಗವಾಗಿ ಕೆರೆ-ದಂಡೆ ಎಂದು ಹೇಳುತ್ತಾ ಸಾಗಿದಂತೆ, ಕೆರೆ-ಕೆರೆ, ದಂಡೆ-ದಂಡೆ ಎಂದು ಸೂಚನೆ ನೀಡಿದಾಗ ಆಟಗಾರರಿಗೆ ಗೊಂದಲ ಶುರುವಾಗುತ್ತದೆ. ಅವರು ಮೈಮರೆವಿನಲ್ಲಿ ಕೆರೆ ಎಂದಾಗ ದಂಡೆಯತ್ತ ಜಿಗಿಯುತ್ತಾರೆ. ದಂಡೆ ಎಂದಾಗ ಕೆರೆಯತ್ತ ಹಾರುತ್ತಾರೆ!. ಹೀಗೆ ಮಾಡಿದವರು ಆಟದಿಂದ ಔಟ್ ಆದಂತೆ! ಹೆಚ್ಚು ಜನ ಆಟಗಾರರು ಇದ್ದರೆ ಭರಪೂರ ಮನರಂಜನೆ ಕೊಡುವ ಆಟ ಇದು. ಒಂದು ರೀತಿಯಲ್ಲಿ ಮ್ಯೂಸಿಕಲ್ ಚೇರ್ ಆಟ ಇದ್ದ ಹಾಗೆ. ಆಟ ಮುಂದುವರಿಯುತ್ತಾ ಹೋದಂತೆಲ್ಲಾ ಔಟ್ ಆಗುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ.
Related Articles
Advertisement