Advertisement

ಜನಮಂಗಲದಡಿ ಅಶಕ್ತರಿಗೆ ಗ್ರಾಮಾಭಿವದ್ಧಿ ಯೋಜನೆ ನೆರವು

07:56 PM Jul 15, 2019 | Sriram |

ಶನಿವಾರಸಂತೆ: ಬಿದರೂರು ಗ್ರಾಮದ ಎಸ್‌.ಎಚ್‌.ಸಲೀಂ (27 ) 4 ವರ್ಷಗಳ ಹಿಂದೆ ಅವಘಡವೊಂದರಲ್ಲಿ ಸೊಂಟದ ಮೂಳೆ ಮುರಿತಕೊಳಗಾಗಿ ಹಾಸಿಗೆಯಲ್ಲೆ ನರಕ ಯಾತನೆಯೊಂದಿಗೆ ಕಾಲಕಳೆಯುತ್ತಿದ್ದಾರೆ. ಕುಟುಂಬಕ್ಕೆ ಸರಕಾರದಿಂದ ನೆರವು ಸಹಕಾರ ಸಿಗದ ಹಿನ್ನಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಲ ಕಾರ್ಯ ಕ್ರಮ ದಡಿಯಲ್ಲಿ ಸಂಸ್ಥೆಯ ಸಿಬಂದಿ‌ ಮನೆಗೆ ಭೇಟಿನೀಡಿ ವೀಲ್‌ಚೇರ್‌ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯೆ ಸರೋಜಮ್ಮ ವೀಲ್‌ಚೇರ್‌ ವಿತರಿಸಿ ಮಾತನಾಡುತ್ತಾ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ ಜನರ ಏಳಿಗೆಗಾಗಿ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಕಣ್ಣೀರನ್ನು ಒರೆಸಿ ಆತ್ಮಸ್ಫೂರ್ತಿ ತುಂಬುತ್ತಿರುವುದು ಶ್ಲಾಘನಿಯ ಎಂದರು.

ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ಕೆ.ರಮೇಶ್‌ ಮಾತನಾಡಿಗ್ರಾಮಾಭಿವೃದ್ದಿ ಯೋಜನೆಯ ಉದ್ದೇಶಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದರ ಜೊತೆಯಲ್ಲಿ ಸಂಸ್ಥೆ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.ಸೇವಾ ಪ್ರತಿನಿಧಿ ಎಸ್‌.ಆರ್‌.ಶೋಭಾವತಿ, ಒಕ್ಕೂಟದ ಅಧ್ಯಕ್ಷೆ ಶಾಹಿನಾ ತಾಜ್‌, ಸಾಮಾಜಿಕ ಕಾರ್ಯಕರ್ತ ಸುರೇಶ್‌ ಒಡೆಯನಪುರ, ಗ್ರಾ.ಪಂ.ಸದಸ್ಯ ಸಂತೋಷ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next