Advertisement
ಈ ಚಿತ್ರಣಕಂಡು ಬಂದದ್ದು ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ. ಅಡಿಕೆ ಹಾಳೆಯನ್ನು ಕಚ್ಚಾವಸ್ತುವನ್ನಾಗಿ ಬಳಸಿ ರೂಪುಗೊಂಡ ಹಾಳೆ ಟೋಪಿಗಳು ಅಲ್ಲಿದ್ದವು. ಕೃಷಿ ಕೆಲಸದಲ್ಲಿ ನಿರತರಾದವರು, ಶ್ರಮವಹಿಸಿ ದುಡಿಯುವವರು ತಮ್ಮ ದುಡಿಮೆಯ ಅವಧಿಯಲ್ಲಿ ಹಾಕಿಕೊಳ್ಳಬಹುದಾದ ಟೋಪಿಗಳಿವು. ಇವುಗಳನ್ನು ಮಾರಾಟಕ್ಕಿಟ್ಟು ಕುಳಿತಿದ್ದವರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶಿರ್ಲಾಲು ನಿವಾಸಿಯಾಗಿರುವ ಅರವತ್ತು ವರ್ಷದ ಬಾಬು ನಲಿಕೆ.
Related Articles
Advertisement
ಹಾಳೆಟೋಪಿ ಸಿದ್ಧಪಡಿಸುವಿಕೆ ಮಾತ್ರವಲ್ಲದೆ ಭೂತಕಟ್ಟುವ ಕಾರ್ಯದಲ್ಲೂ ಇವರು ತೊಡಗಿಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ದಿನಕ್ಕೆ ಸುಮಾರು ೨೦ ಟೋಪಿಗಳನ್ನು ಸಿದ್ಧಪಡಿಸುತ್ತಾರೆ. ಒಂದು ಟೋಪಿ ಸಿದ್ಧಪಡಿಸುವ ಹಂತ ವಿಶೇಷತೆಯನ್ನು ಹೊಂದಿದೆ. ಅಡಿಕೆ ಹಾಳೆಯನ್ನು ಸಂಗ್ರಹಿಸಿ ಅದನ್ನು ನೀರಿನಲ್ಲಿ ನೆನೆ ಹಾಕಿಡುತ್ತಾರೆ. ಬಳಿಕ ಆಯಾ ಅಳತೆಗಳಿಗೆ ಕತ್ತರಿಸಿ ಹದವನ್ನು ಮಾಡಲಾಗುತ್ತದೆ.
ಅಳದಂಗಡಿ ಸುತ್ತಮುತ್ತಲಿನ ಅಡಿಕೆ ತೋಟದಿಂದ ಖರೀದಿಸುವ ಒಂದು ಹಾಳೆಯ ಬೆಲೆ ೧.೫ ರೂಪಾಯಿ. ನಷ್ಟವನ್ನು ಉಂಟುಮಾಡದೇ ಕೇವಲ ಲಾಭವನ್ನು ನೀಡುವ ಈ ಹಾಳೆ ಟೋಪಿ ಸಿದ್ಧಪಡಿಸುವಿಕೆಯು ಗ್ರಾಮೀಣ ಸೊಗಡಿಗೆ ನಿದರ್ಶನವಾಗುತ್ತದೆ.
ವರ್ಷದಿಂದ ವರ್ಷ ಕ್ಕೆಗ್ರಾಹಕರ ಸಂಖ್ಯೆಯು ಹೆಚ್ಚುತ್ತಿದ್ದು, ಹಾಳೆಟೋಪಿಯ ಬೇಡಿಕೆ ಹೆಚ್ಚಿರುವುದು ಸಂತೋಷದ ವಿಷಯವಾಗಿದೆ. ನವಜೀವನ ಸಂಸ್ಥೆ ಹಾಗೂ ಸ್ವಸಹಾಯ ಸಂಘದ ವತಿಯಿಂದ ಲಕ್ಷದೀಪೋತ್ಸವದಲ್ಲಿ ಹಾಳೆಟೋಪಿಗಳನ್ನು ಮಾರಾಟ ಮಾಡಲಾಗುತ್ತದೆ. ಆಧುನಿಕ ದಿನಗಳಲ್ಲಿ ಬಣ್ಣ-ಬಣ್ಣದ ಟೋಪಿಗಳ ನಡುವೆ ಇದು ಗ್ರಾಮೀಣ ಸೊಗಡನ್ನು ನೆನಪಿಸುತ್ತಿದೆ.
ವರದಿ-ಚಿತ್ರ: ಪಲ್ಲವಿ ಜೋಶಿ
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಕಾಲೇಜು, ಉಜಿರೆ