Advertisement
ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್ಕಿನ್‌ಗಳಿಗೆ ದುಬಾರಿ ಬೆಲೆ. ಬಡ ಹೆಣ್ಣುಮಕ್ಕಳಿಗೆ ಇದನ್ನು ಭರಿಸಲು ಕಷ್ಟಸಾಧ್ಯ. ಇದಕ್ಕಾಗಿ ಆರಂಭದಲ್ಲಿ “ಸುವಿಧಾ’ ಹೆಸರಿನಲ್ಲಿ 10 ರೂ.ಗೆ ನಾಲ್ಕು ನ್ಯಾಪ್ಕಿನ್‌ಗಳನ್ನು ನೀಡುವ ವ್ಯವಸ್ಥೆಯನ್ನು ದೇಶವ್ಯಾಪಿಯಾಗಿ ವರ್ಷದ ಹಿಂದೆ ಆರಂಭಿಸಲಾಗಿತ್ತು. 2019ರ ಆ.27ರಿಂದ ಕೇಂದ್ರ ಸರಕಾರವು ಬೆಲೆಯನ್ನು ಇನ್ನಷ್ಟು ಕಡಿಮೆಗೊಳಿಸಿ 4 ಪ್ಯಾಡ್ ಹೊಂದಿರುವ ಪ್ಯಾಕೆಟ್‌ಗೆ 4 ರೂ. ನಿಗದಿಪಡಿಸಿತ್ತು. ಆದರೆ ಆರಂಭದ ಒಂದು ತಿಂಗಳು ಮಾತ್ರ ಇದು ದ.ಕ. ಮತ್ತು ಉಡುಪಿ ಜಿಲ್ಲೆಯ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿದೆ. ಪ್ರಸ್ತುತ ರಾಜ್ಯದ ಬಹುತೇಕ ಜನೌಷಧ ಕೇಂದ್ರಗಳಲ್ಲಿ ಇದು ಸ್ಥಗಿತಗೊಂಡಿದೆ.
ಸಾಮಾನ್ಯವಾಗಿ ಮೆಡಿಕಲ್ ಅಥವಾ ಇತರ ಅಂಗಡಿಗಳಲ್ಲಿ 6 ಸ್ಯಾನಿಟರಿ ನ್ಯಾಪ್ಕಿನ್‌ಗಳಿಗಿರುವ ಪ್ಯಾಕೆಟ್‌ಗೆ 35 ರೂ.ಗಳಿಗಿಂತ ಮೇಲ್ಪಟ್ಟು ಬೆಲೆ ಇರುತ್ತದೆ. ಆದರೆ ಬಡ ವರ್ಗದ ಹೆಣ್ಣು ಮಕ್ಕಳು ಪ್ರತಿ ತಿಂಗಳು ಇಷ್ಟು ಹಣ ನೀಡಿ ಖರೀದಿಸುವುದು ಕಷ್ಟ ಎಂದು ಕೇಂದ್ರ ಸರಕಾರ 4 ನ್ಯಾಪ್ಕಿನ್‌ಗಳನ್ನು ಒಳಗೊಂಡ ಪ್ಯಾಕೆಟ್‌ಗೆ 4 ರೂ. ಬೆಲೆ ನಿಗದಿಪಡಿಸಿ ಜನೌಷಧ ಕೇಂದ್ರಗಳ ಮೂಲಕ ಪೂರೈಸಲು ಮುಂದಾಗಿತ್ತು.
Related Articles
1 ರೂ.ಗೆ 1 ನ್ಯಾಪ್‌ಕಿನ್ ಸಿಗುತ್ತಿದೆ.
ಅಲಭ್ಯ ಇದ್ದರೆ ಪರಿಶೀಲಿಸುತ್ತೇನೆ. ಸ್ಯಾನಿಟರಿ ನ್ಯಾಪ್ಕಿನ್ ಕೊರತೆ ಎದು ರಾಗುತ್ತಿದ್ದರೆ, ತತ್‌ಕ್ಷಣವೇ ಹೊಸದಿಲ್ಲಿ ಯಲ್ಲಿ ಅಧಿಕಾರಿಗಳ ಸಭೆ ಕರೆದು ಬಡ ಜನರಿಗೆ ಕೇಂದ್ರದ ಈ ಮಹತ್ವಾಕಾಂಕ್ಷೆಯ ಸೇವೆ ತಲುಪುವಂತೆ ಕ್ರಮ ವಹಿಸುತ್ತೇನೆ.
-ಡಿ. ವಿ. ಸದಾನಂದ ಗೌಡ
ಕೇಂದ್ರ ಸಚಿವರು
Advertisement
- ಧನ್ಯಾ ಬಾಳೆಕಜೆ