Advertisement

ನರೇಂದ್ರ ಮೋದಿ ಕುರಿತು ರೂಪಾ ಅಯ್ಯರ್‌ ಸಿನಿಮಾ

11:09 AM Mar 07, 2018 | |

ನಿರ್ದೇಶಕಿ, ಅಂಕಣಗಾರ್ತಿ ರೂಪಾ ಅಯ್ಯರ್‌ ಈಗ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಅದು ಸಿನಿಮಾ ಕ್ಷೇತ್ರದಲ್ಲೇ. ಈಗಾಗಲೇ “ಮುಖಪುಟ’, “ಚಂದ್ರ’ ಹಾಗೂ “ಕಲರ್’ ನಂತಹ ವಿಭಿನ್ನ ಕಥಾಹಂದರ ಸಿನಿಮಾ ನಿರ್ದೇಶಿಸಿದ್ದ ರೂಪಾ ಅಯ್ಯರ್‌ ಈಗ ಹೊಸ ಸಿನಿಮಾವೊಂದನ್ನು ಮಾಡಲು ರೆಡಿಯಾಗಿದ್ದಾರೆ. ಅದು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಎಂಬುದು ವಿಶೇಷ.

Advertisement

ಹೌದು, ರೂಪಾ ಅಯ್ಯರ್‌ “ನಮೋ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಅಂತಿಮವಾಗಿದ್ದು, ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ. “ನಮೋ’ ಎಂದ ಮೇಲೆ ಇದು ನರೇಂದ್ರ ಮೋದಿಯವರ ಕುರಿತಾದ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನರೇಂದ್ರ ಮೋದಿಯವರ ಜೀವನ ಚರಿತ್ರೆಯನ್ನಾಧರಿಸಿ ರೂಪಾ ಅಯ್ಯರ್‌ ಈ ಸಿನಿಮಾ ಮಾಡುತ್ತಿದ್ದಾರೆ.

ಚಿತ್ರಕ್ಕಾಗಿ ನರೇಂದ್ರ ಮೋದಿಯವರ ಜೀವನದ ಕುರಿತಾದ ಅಂಶಗಳನ್ನು ಸಂಶೋಧಿಸಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಈ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ, ಹಿಂದಿಯಲ್ಲೂ ಮೂಡಿಬರುತ್ತಿದೆ. ತಮ್ಮ ಹೊಸ ಸಿನಿಮಾದ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ರೂಪಾ ಅಯ್ಯರ್‌, “ಒಬ್ಬ ನಾಯಕರಾಗಿ ನರೇಂದ್ರ ಮೋದಿಯವರು ಯುವ ಜನತೆಗೆ ಪ್ರೇರಣೆಯಾದ ರೀತಿ ನನಗೆ ತುಂಬಾ ಇಷ್ಟವಾಯಿತು.

ಹಾಗಾಗಿ, “ನಮೋ’ ಸಿನಿಮಾ ಮಾಡಲು ನಿರ್ಧರಿಸಿದ. ವರ್ಷದ ಹಿಂದೆ ಸ್ಕ್ರಿಪ್ಟ್ ಸಿದ್ಧಪಡಿಸಿದ್ದೆ. ಈಗ ಸಿನಿಮಾವಾಗುತ್ತಿದೆ. ಈ ಚಿತ್ರಕ್ಕೊಂದು ಆಧ್ಯಾತ್ಮಿಕ ಹಿನ್ನೆಲೆಯೂ ಇರಲಿದೆ. ಅಮೆರಿಕಾದಲ್ಲಿರುವ ಸ್ನೇಹಿತೆಯೊಬ್ಬರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ’ ಎಂದು ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾರೆ ರೂಪಾ ಅಯ್ಯರ್‌. ಚಿತ್ರದ ಕಲಾವಿದರ ಸೇರಿದಂತೆ ಇತರ ವಿಭಾಗದ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next