Advertisement

ಬ್ರಿಟನ್‌ ಸಚಿವ ಕ್ವಾಸಿ ಕ್ವಾರ್ಟೆಂಗ್‌ ಗೆ ನಿಂದನೆ: ಎನ್ನಾರೈ ಸಂಸದೆ ಸಸ್ಪೆಂಡ್‌

10:20 PM Sep 27, 2022 | Team Udayavani |

ಲಂಡನ್‌: ಬ್ರಿಟನ್‌ನ ವಿತ್ತ ಸಚಿವ ಕ್ವಾಸಿ ಕ್ವಾರ್ಟೆಂಗ್‌ ಅವರ ವಿರುದ್ಧ ಜನಾಂಗೀಯ ನಿಂದನೆ ಆರೋಪ ಮಾಡಿದ ಪ್ರತಿಪಕ್ಷ ಲೇಬರ್‌ ಪಕ್ಷದ ಸಂಸದೆ, ಭಾರತೀಯ ಮೂಲದ ರೂಪಾ ಹಕ್‌ ಅವರನ್ನು ಪಕ್ಷದಿಂದ ಸಸ್ಪೆಂಡ್‌ ಮಾಡಲಾಗಿದೆ.

Advertisement

ಲಿವರ್‌ಪೂಲ್‌ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯಲ್ಲಿ ರೂಪಾ ಅವರು ವಿತ್ತ ಸಚಿವರನ್ನು “ಕಪ್ಪು ಬಣ್ಣದವರು, ಶಿಕ್ಷಣವಿಲ್ಲದವರು’ ಎಂದೆಲ್ಲ ನಿಂದಿಸಿದ್ದರು.

ಇದು ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ರೂಪಾ ವಿರುದ್ಧ ಲೇಬರ್‌ ಪಕ್ಷದ ನಾಯಕ ಕೇರ್‌ ಸ್ಟಾರ್ಮರ್‌ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣಗಳಲ್ಲಿ ಒತ್ತಾಯ, ಸಭೆಯಲ್ಲಿ ಕೇರ್‌ ಸ್ಟಾರ್ಮರ್‌ಗೆ ಮಾತನಾಡಲೂ ಅವಕಾಶ ನೀಡದಿದ್ದೂ, ಸಸ್ಪೆಂಡ್‌ ನಿರ್ಧಾರಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next