Advertisement
ದಕ್ಷಿಣ ಕನ್ನಡ ಜಿಲ್ಲಾ ನೇತ್ರ ಚಿಕಿತ್ಸಾ ತಜ್ಞರ ಸಂಘವು ದ.ಕ. ಜಿಲ್ಲೆಯ ಮತ್ತು ಆಸುಪಾಸಿನ ನೇತ್ರ ತಜ್ಞರ ಸಹಕಾರದಲ್ಲಿ ನೇತ್ರದಾನ ಜಾಗೃತಿ ಪಕ್ಷಾಚರಣೆಯ ಅಂಗವಾಗಿ ರವಿವಾರ ನಗರದಲ್ಲಿ ಏರ್ಪಡಿಸಿದ್ದ ‘ಎಂಆರ್‌ಪಿಎಲ್ ದೃಷ್ಟಿ ದಾನ 5 ಕಿ.ಮೀ. ಓಟ ಮತ್ತು 2 ಕಿ.ಮೀ. ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಮುಕ್ತಾಯದ ಬಳಿಕ ವಿಜೇತರಿಗೆ ಅವರು ಬಹುಮಾನ ವಿತರಿಸಿದರು.
ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಬಳಿ ಆರಂಭವಾದ ಓಟ/ ನಡಿಗೆಯು ನೆಹರೂ ಮೈದಾನ್‌ನಲ್ಲಿ ಸಮಾರೋಪಗೊಂಡಿತು. ನೇತ್ರದಾನದ ಅಗತ್ಯ ಮತ್ತು ಅದನ್ನು ದಾನ ಮಾಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನೇತ್ರ ತಜ್ಞರ ಸಂಘದ ಮೂಲಕ ವ್ಯವಸ್ಥೆ ಮಾಡಿರುವುದು ಒಂದು ಒಳ್ಳೆಯ ಕಾರ್ಯಕ್ರಮ ಎಂದು ಹರೀಶ್ ಬಾಳಿಗಾ ಅವರು ಅಭಿನಂದಿಸಿದರು. ಅರಿವು ಕಾರ್ಯಕ್ರಮ ನೇತ್ರಾದಾನದ ಬಗ್ಗೆ ಅರಿವು ಮುಡಿಸುವ ನಿಟ್ಟಿನಲ್ಲಿ ಈ ವಿಶೇಷ ಓಟ ಕಾರ್ಯಕ್ರಮ ನಡೆದಿದ್ದು, ಸಂಚಾರಿ ವಾಹನದ ಮೂಲಕ ವಿವಿಧ ಗ್ರಾಮಗಳಿಗೆ ತೆರಳಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ| ಸುಧೀರ್ ಹೆಗ್ಡೆ ಹೇಳಿದರು. ಎಂಆರ್‌ಪಿಎಲ್ ಈ ಕಾರ್ಯಕ್ರಮದ ಮುಖ್ಯ ಪ್ರಾಯೋಜನೆ ವಹಿಸಿದ್ದು, ರೋಟರಿ ಇಂಟರ್ ನ್ಯಾಶನಲ್, ರೌಂಡ್ ಟೇಬಲ್, ಸಮ್‌ವಿತ್ತಿ ಕ್ಯಾಪಿಟಲ್, ಭಾರತ್ ಮೋಟಾರ್, ಆಭರಣ ಜುವೆಲರ್, ಮೇರಿಯನ್ ಬಿಲ್ಡರ್ , ಜ್ಯೂಯಿಸ್ ಜಿಮ್ ಹಾಗೂ ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜು ಗಳ ಸಹಯೋಗ ಪಡೆಯಲಾಗಿತ್ತು. ಕರ್ನಾಟಕ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ| ಸಾಯಿ ಗಿರಿಧರ್ ಮತ್ತಿತರರು ಉಪಸ್ಥಿತರಿದ್ದರು. ಡಾ| ಅಜಯ್ ಕುಡ್ವಾ ಸ್ವಾಗತಿಸಿ ಡಾ| ವಿಕ್ರಂ ಪೈ ವಂದಿಸಿದರು. ಆಕಾಂಕ್ಷಾ ಕಾರ್ಯಕ್ರಮ ನಿರ್ವಹಿಸಿದರು.