ಹುಬ್ಬಳ್ಳಿ: ಬಹು ದಿನಗಳ ಬೇಡಿಕೆಯಾಗಿದ್ದ ದಿಲ್ಲಿ – ಹುಬ್ಬಳ್ಳಿ ವಿಮಾನಯಾನಕ್ಕೆ ಸೋಮವಾರ ಕೇಂದ್ರ ನಾಗರಿಕರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹಸುರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಇದೇ ವಿಮಾನದಲ್ಲಿ ಪ್ರಹ್ಲಾದ ಜೋಷಿ ದಿಲ್ಲಿಗೆ ತೆರಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಹ್ಲಾದ ಜೋಷಿ, ಹುಬ್ಬಳ್ಳಿ-ದಿಲ್ಲಿ ನಡುವೆ ನೇರ ವಿಮಾನ ಸೌಲಭ್ಯ ಬೇಕೆಂಬ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ಭಾಗದ ಪ್ರಗತಿಯ ದೃಷ್ಟಿಯಿಂದ ಇದು ಮಹತ್ವದ ಮೈಲುಗಲ್ಲಾಗಿದೆ.
ಹುಬ್ಬಳ್ಳಿಯಿಂದ ಕೇವಲ 2 ತಾಸು 30 ನಿಮಿಷಗಳಲ್ಲಿ ದಿಲ್ಲಿ ತಲುಪಬಹುದಾಗಿದೆ. ಪ್ರತಿ ನಿತ್ಯ ವಿಮಾನಯಾನ ಸೇವೆ ಲಭ್ಯವಿದೆ ಎಂದರು.