ಮಹಾನಗರ: ಜಿಲ್ಲಾ ಗೃಹರಕ್ಷಕ ದಳ ಮತ್ತು ಲಯನ್ಸ್ ಕ್ಲಬ್ ತುಳುನಾಡು ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಶಿಬಿರ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ನ್ಯಾಯವಾದಿ, ಲೋಕಾಯುಕ್ತ ದ.ಕ. ಜಿಲ್ಲಾ ಮತ್ತು ಭ್ರಷ್ಟಾಚಾರ ನಿಗ್ರಹದಳದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್.ರಾಜೇಶ್ ಮಾತನಾಡಿ, ಮತದಾನ ಎನ್ನುವುದು ಬಹಳ ಪವಿತ್ರವಾದ ಪ್ರಕ್ರಿಯೆ. ನಿಮ್ಮ ಮತದಾನವನ್ನು ವ್ಯರ್ಥಗೊಳಿಸದಿರಿ. ನಿಮ್ಮ ಮತವನ್ನು ಯೋಗ್ಯ ವ್ಯಕ್ತಿಗೆ ಅಧಿ ಕಾರಯುತವಾಗಿ ಚಲಾಯಿಸಿ ಎಂದರು.
ಗೃಹ ರಕ್ಷ ಕರು ಮಾದರಿ
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ದಿವಾಕರ್ ವಿಲ್ಸನ್ ಮಾತ ನಾಡಿ, ಗೃಹರಕ್ಷಕರು ಇತರರಿಗೆ ಮಾದರಿ. ಸುರಕ್ಷಿತ ಮತ್ತು ನ್ಯಾಯೋಚಿತ ಮತದಾನ ಮಾಡಲು ಗೃಹರಕ್ಷಕರು ಅನಿವಾರ್ಯ ಎಂದು ಹೇಳಿದರು. ಉಪಸಮಾದೇಷ್ಟರಾದ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ ನಿರೂಪಿಸಿದರು. ಶುಭ ಕುಲಾಲ್ ವಂದಿಸಿದರು. ಸುಮಾರು 30 ಮಂದಿ ಗೃಹರಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿಯೊಬ್ಬರ ಮತವೂ ಅತ್ಯಮೂಲ್ಯ
ಅಧ್ಯಕ್ಷತೆ ವಹಿಸಿದ್ದ ಸಮಾದೇಷ್ಟಕ ಡಾ| ಮುರಲೀ ಮೋಹನ ಚೂಂತಾರು ಮಾತನಾಡಿ, ಮತಪತ್ರ ಎನ್ನುವುದು ಸುಡುಮದ್ದಿಗಿಂತಲೂ ಶಕ್ತಿಶಾಲಿ. ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸಬಹುದು. ಪ್ರತಿಯೊಂದು ಮತವೂ ಅತ್ಯಮೂಲ್ಯ. ನೀವು ಮತದಾನ ಮಾಡದಿದ್ದಲ್ಲಿ ನೀವು ಇತರರನ್ನು ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತೀರಿ. ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು ಎಂದರು.