ಬೆಂಗಳೂರು: ರಾಜ್ಯದಲ್ಲಿರುವ ಎರಡೂವರೆ ಲಕ್ಷ ಎಕರೆ ಬಂಜರು ಭೂಮಿಯನ್ನು ಪುನಃಶ್ಚೇತನ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
“ಮಣ್ಣು ಉಳಿಸಿ’ ಅಭಿಯಾನ ಕೈಗೊಂಡಿರುವ ಈಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ್ ಅವರು ಬೆಂಗಳೂರಿಗೆ ಆಗಮಿಸಿದ್ದು, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, “ಶೇ.24ರಷ್ಟಿದ್ದ ಅರಣ್ಯ ಪ್ರದೇಶವನ್ನು ಶೇ.30ಕ್ಕೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಮಣ್ಣನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ರವಿವಾರ ರೈತರ ಬಳಿ ಹೋಗುವ ಸಂಕಲ್ಪ ಮಾಡಬೇಕಿದೆ. ತಿಂಗಳಲ್ಲಿ ನಾಲ್ಕು ದಿನಗಳ ಕಾಲ ನಮ್ಮ ನಡೆ ಮಣ್ಣಿನ ಕಡೆ ಆಗಬೇಕು’ ಎಂದರು.
“ಎಲ್ಲರೂ ಮಣ್ಣನ್ನು ಉಳಿಸಿ’ ಎಂದು ಭಾಷಣ ಆರಂಭಿಸಿದ ಮುಖ್ಯಮಂತ್ರಿ, ಇದೊಂದು ಅಪರೂಪದ ಮತ್ತು ಅನುಕರಣೀಯ ಸಮಾರಂಭವಾಗಿದೆ. ಹಲವಾರು ಸಮಾರಂಭಗಳು ಅಭಿ ವೃದ್ಧಿ, ರಾಜಕೀಯದ ಬಗ್ಗೆ ನಾವು ನೋಡಿದ್ದೇವೆ. ಆದರೆ, ನಮ್ಮ ಭವಿಷ್ಯ ಹಾಗೂ ಪಂಚಭೂತಗಳಿಗೆ ಕಾರಣವಾಗಿರುವ ಮಣ್ಣಿನ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘಿ ಸಿದರು.
Related Articles
ಅರ್ಥಪೂರ್ಣ: ಬಿಎಸ್‌ವೈ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ನಾಗರಿಕತೆ ಎಷ್ಟೇ ಮುಂದುವರಿದರೂ ಮನುಷ್ಯವಿಗೆ ಅಗತ್ಯವಾಗಿ ಬೇಕಾಗಿರುವುದು ಉಸಿರಾಡಲು ಪರಿಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಆಹಾರ. ಈಗ ಶುದ್ಧವಾದ ಗಾಳಿಯೇ ಇಲ್ಲದಂತಾಗಿದೆ. ಆಹಾರ ಉತ್ಪಾದನೆ ಲಭ್ಯವಿರುವ ಮಣ್ಣನ್ನು ನಾವು ಲಭ್ಯ ಮಾಡಿಕೊಳ್ಳದೆ ಸಾಕಷ್ಟು ಮಾರ್ಪಾಡು ಮಾಡಿಕೊಳ್ಳುತ್ತಿದ್ದೇವೆ. ಸದ್ಗುರು ಕೈಗೊಂಡಿರುವ ಅಭಿಮಾನದಲ್ಲಿ ಭಾಗಿ ಯಾಗಿ ನೈಸರ್ಗಿಕ ಸಂಪನ್ಮೂಲವನ್ನು ಉಳಿಸಬೇಕಾಗಿದೆ ಎಂದರು.
ಪೂರಕವಾಗಿಲ್ಲ
ಸದ್ಗುರು ಮಾತನಾಡಿ, ಭಾರತದಲ್ಲಿ ಶೇ.30ರಷ್ಟು ಮಣ್ಣು ಈಗಾಗಲೇ ಕೃಷಿಗೆ ಪೂರಕವಾಗಿಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಕೆಲಸ ಮಾಡುತ್ತಿದೆ ಎಂದರು.ಸಚಿವರಾದ ಬಿ.ಸಿ. ನಾಗೇಶ್ ಮತ್ತು ಡಾ| ಕೆ. ಸುಧಾಕರ್ ಉಪಸ್ಥಿತರಿದ್ದರು.