Advertisement

ಟಿಮ್‌ ಪೇನ್‌ ನಾಟೌಟ್‌, ಅಜಿಂಕ್ಯ ರಹಾನೆ ರನೌಟ್‌! ಏನಿದು ಅಂಪಾಯರ್ ವಿಚಿತ್ರ ತೀರ್ಪು

04:01 PM Dec 29, 2020 | keerthan |

ಮೆಲ್ಬರ್ನ್: ಒಂದೇ ಪಂದ್ಯದಲ್ಲಿ ಒಂದೇ ರೀತಿಯ ಎರಡು ಸನ್ನಿವೇಶಗಳಲ್ಲಿ ಅಂಪಾಯರ್ ಎರಡು ರೀತಿಯ ತೀರ್ಪು ನೀಡಿದ ಪ್ರಸಂಗ ಮೆಲ್ಬರ್ನ್ ಪಂದ್ಯದಲ್ಲಿ ನಡೆಯಿತು. ಈ ತೀರ್ಪುಗಳಿಗೆ ಸಾಕಷ್ಟು ಟೀಕೆಗಳೂ ಕೇಳಿಬಂದವು.

Advertisement

ಆಸ್ಟ್ರೇಲಿಯ ಇನ್ನಿಂಗ್ಸ್‌ ವೇಳೆ ಟಿಮ್‌ ಪೇನ್‌ ರನೌಟ್‌ ಎಂಬ ಮನವಿಯನ್ನು ಹಲವು ಕೋನಗಳಿಂದ ಪರಿಶೀಲಿಸಿದ ತೃತೀಯ ಅಂಪಾಯರ್‌, ಸಂಶಯದ ಲಾಭ ನೀಡಿ ನಾಟೌಟ್‌ ಎಂದು ಘೋಷಿಸಿದ್ದರು. ಆದರೆ ಸೋಮವಾರ ಅದೇ ರೀತಿಯ ರನೌಟ್‌ಗೆ ಅಜಿಂಕ್ಯ ರಹಾನೆ ಬಲಿಯಾಗಬೇಕಾಯಿತು. ಇಲ್ಲಿಯೂ ರಹಾನೆ ಬ್ಯಾಟ್‌ ಕ್ರೀಸ್‌ಗೆ ತಾಗಿರುವುದು ಸ್ಪಷ್ಟವಾಗಿತ್ತು. ಆದರೆ ರನೌಟ್‌ ಎಂದು ತೀರ್ಪು ನೀಡಲಾಯಿತು. ಇಲ್ಲೇಕೆ ರಹಾನೆಗೆ ಸಂಶಯದ ಲಾಭ ನೀಡಲಿಲ್ಲ ಎಂದು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದ ಬಗ್ಗೆ ಕುಹಕವಾಡಿದ್ದ ಮೈಕಲ್ ವಾನ್ ಗೆ ಟ್ರೋಲ್ ಮಾಡಿದ ಅಭಿಮಾನಿಗಳು

ಈ ಪಂದ್ಯವನ್ನು ಭಾರತ ತಂಡ ಎಂಟು ವಿಕೆಟ್ ಅಂತರದಿಂದ ಗೆದ್ದಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಅಜಿಂಕ್ಯ ರಹಾನೆ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ 27 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಪಂದ್ಯಶ್ರೇಷ್ಠ ಪುರಸ್ಕಾರವೂ ಅವರದೇ ಪಾಲಾಯಿತು.

ರಹಾನೆ ನಡವಳಿಕೆಗೆ ಮೆಚ್ಚುಗೆ

Advertisement

ರವೀಂದ್ರ ಜಡೇಜ ಚೆಂಡನ್ನು ಕವರ್‌ ಕಡೆಗೆ ತಳ್ಳಿ ಸಿಂಗಲ್‌ ಗಾಗಿ ಓಡಿದರು. ಆಗ ರಹಾನೆ ರನೌಟಾದರು. ಆದರೆ ಬೇಸರಿಸಲಿಲ್ಲ. ಜಡೇಜ ಅವರನ್ನು ಹುರಿದುಂಬಿಸಿ, ದೊಡ್ಡ ಮೊತ್ತ ಪೇರಿಸುವಂತೆ ಸನ್ನೆ ಮಾಡಿ ನಿರ್ಗಮಿಸಿದರು. ಈ ಕ್ರಿಕೆಟ್‌ ಸ್ಫೂರ್ತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ರಹಾನೆಯಿಂದಾಗಿ ರನೌಟಾದಾಗ ಕೊಹ್ಲಿ ವರ್ತಿಸಿದ ರೀತಿಯನ್ನು ಅಭಿಮಾನಿಗಳು ಹೋಲಿಸಿ ನೋಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next