Advertisement

ಜಾತಿ-ಧರ್ಮ ನಮೂದು ವದಂತಿಗಳನ್ನು ಹರಡಬೇಡಿ ಎಂದ ಹಣಕಾಸು ಸಚಿವಾಲಯ

10:16 AM Dec 23, 2019 | Sriram |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ದೇಶದೆಲ್ಲೆಡೆ ಹಲವಾರು ವದಂತಿಗಳು ಹರಡುತ್ತಿವೆ. ಪ್ರತಿಯೊಂದಕ್ಕೂ ಜಾತಿ/ಧರ್ಮ ನಮೂದಿಸಬೇಕಾದ ಅಗತ್ಯವಿದೆ ಎಂಬ ಊಹಾಪೋಹ ಕೇಳಿಬರುತ್ತಿದ್ದು, ಕಾಯ್ದೆ ಕುರಿತು ಜನರಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಅಥವಾ ಈಗಿರುವ ಖಾತೆಗೆ ಹೆಚ್ಚುವರಿ ಮಾಹಿತಿ ನೀಡಬೇಕೆನಿಸಿದರೆ ಜಾತಿ/ಧರ್ಮದ ಹೆಸರು ನಮೂದಿಸಬೇಕಾಗುತ್ತದೆ ಎಂದು ವದಂತಿ ಹರಡಿರುವ ಬೆನ್ನಲ್ಲೇ ಕೇಂದ್ರ ಸರಕಾರ ಈ ನಿಯಮವನ್ನು ಜಾರಿಯಲ್ಲಿ ಇಲ್ಲ ಎಂದು ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಹಣಕಾಸು ಸಚಿವಾಲಯದ ಕಾರ್ಯದರ್ಶಿ ರಾಜೀವ್‌ ಕುಮಾರ್‌, ಇಂಥ ಯಾವುದೇ ವದಂತಿಗಳನ್ನು ಸಾರ್ವಜನಿಕರು ನಂಬಬಾರದು. ಬ್ಯಾಂಕ್‌ಗಳು ಇದುವರೆಗೂ ಯಾವುದೇ ರೀತಿಯ ಸೂಚನೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಕೆವೈಸಿ (ಗ್ರಾಹಕರ ಮಾಹಿತಿ) ತುಂಬಬೇಕಾದರೆ ಈ ರೀತಿಯ ಮಾಹಿತಿ ನೀಡುವ ಅಗತ್ಯವೇ ಇಲ್ಲ. ವದಂತಿಗಳನ್ನು ಹರಡಬೇಡಿ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.