Advertisement

ಪಾಕ್‌ ಪ್ರಧಾನಿ ಷರೀಫ್ ದೇಶ ತೊರೆಯುವುದು ವದಂತಿ

03:45 AM Apr 06, 2017 | Team Udayavani |

ಲಾಹೋರ್‌: ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್ ದೇಶ ಬಿಟ್ಟು ತೆರಳುವುದಿಲ್ಲ.ಈ ಬಗೆಗಿನ ವರದಿಗಳು ಆಧಾರ ರಹಿತ ಎಂದಿದೆ ಪಾಕಿಸ್ತಾನ ಮುಸ್ಲಿಂ ಲೀಗ್‌- ಎನ್‌. ಪನಾಮಾ ದಾಖಲೆಗಳಲ್ಲಿ ಪಾಕ್‌ ಪಿಎಂ ಬಂಧುಗಳು ತೆರಿಗೆ ಸ್ವರ್ಗ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಶೀಘ್ರದಲ್ಲಿಯೇ ಸುಪ್ರೀಂಕೋರ್ಟು ತೀರ್ಪು ನೀಡಲಿದೆ. ಅದರಲ್ಲಿ ಹಿನ್ನಡೆಯಾದರೆ ದೇಶ ಬಿಟ್ಟು ತೆರಳಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು. ಅದನ್ನು ಷರೀಫ್ರ ಪಕ್ಷ ಸರಾಸಗಟಾಗಿ ತಳ್ಳಿ ಹಾಕಿದೆ. ಈ ವರದಿಗಳನ್ನು ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ರ ಪಕ್ಷವೇ ಹಬ್ಬಿಸುತ್ತಿರಬೇಕೆಂದು ಪಕ್ಷ ನಾಯಕರು ಆಕ್ಷೇಪಿಸಿದ್ದಾರೆ.

Advertisement

ಇತ್ತೀಚೆಗಷ್ಟೇ ಅವರಿಗೆ ಕಿಡ್ನಿಯಲ್ಲಿ ಕಲ್ಲು ಪತ್ತೆಯಾಗಿತ್ತು. ಹೀಗಾಗಿ ಅದರ ಚಿಕಿತ್ಸೆಗಾಗಿ ಷರೀಫ್ ಅವರು ಲಂಡನ್‌ಗೆ ತೆರಳುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಲಂಡನ್‌ಗೆ ತೆರಳಿದ್ದರು.
ಅಮೆರಿಕ ಪ್ರಸ್ತಾಪಕ್ಕೆ ಸ್ವಾಗತ: ಇದೇ ವೇಳೆ ಕಾಶ್ಮೀರ ವಿಚಾರ ವಿವಾದ ಪರಿಹಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಪ್ರವೇಶಿಸುವ ಪ್ರಸ್ತಾಪವನ್ನು ನೆರೆಯ ರಾಷ್ಟ್ರ ಸ್ವಾಗತಿಸಿದೆ. ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿ ಏಜಾಜ್‌ ಅಹ್ಮದ್‌ ಚೌಧರಿ ಇದು ಸರಿಯಾದ ಕ್ರಮ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next