Advertisement
ಬೆಳಗ್ಗಿನಿಂದಲೇ ಅಂಗಡಿಗಳ ಮುಂದೆ ಮದ್ಯಪ್ರಿಯರು ಸಾಲುಗಟ್ಟಿ ನಿಂತಿದ್ದರು. ಅಂಗಡಿಗಳಲ್ಲೂ ಹೆಚ್ಚುವರಿ ಸಿಬಂದಿ ನಿಯೋಜಿಸಲಾಗಿತ್ತು. ಕೆಲವೆಡೆ ಮಳಿಗೆ ಗಳನ್ನು ಸಮಯಕ್ಕಿಂತ ಮೊದಲೆ ತೆರೆದು ಮದ್ಯ ಮಾರಾಟ ಪ್ರಾರಂಭಿಸಲಾಯಿತು.
ಹಲವೆಡೆ ಸಾಮಾಜಿಕ ಅಂತರ, ಮಾಸ್ಕ್ ಹಾಕಬೇಕಾದ ನಿಯಮ ಪಾಲಿಸಿರಲಿಲ್ಲ. ಕೆಲವೆಡೆ ಗೇಟ್, ಶಾಮಿಯಾನ ಹಾಕಲಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಜನಜಂಗುಳಿ ಇದ್ದು, ಹಲವರು ಒಂದು ಶಾಪ್‌ನಿಂದ ಇನ್ನೊಂದು ಕಡೆಗೆ ಅಡ್ಡಾಡುತ್ತಿದ್ದರು. ಕೆಲವೆಡೆ ಮದ್ಯಕ್ಕಾಗಿ ಬಾಡಿಗೆ ಜನರನ್ನು, ಕಾರ್ಮಿಕರನ್ನು ನಿಲ್ಲಿಸಿದ ಪ್ರಸಂಗವೂ ನಡೆದಿದೆ. ಅವಧಿ ಮೀರಿ ಮಾರಾಟ
ಮಧ್ಯಾಹ್ನ 1 ಗಂಟೆಗೆ ಮಾರಾಟ ನಿಲ್ಲಿಸಬೇಕು ಎಂಬ ಸೂಚನೆಯಿದ್ದರೂ ಕೂಡ ನಗರದ ಕೆಲವೆಡೆ ಅರ್ಧಗಂಟೆಯಷ್ಟು ಹೆಚ್ಚು ಕಾಲ ಮಾರಾಟ ಮಾಡಲಾಯಿತು. ಹಲವರು ಮದ್ಯ ಸಿಗದೆ ನಿರಾಸೆಗೂ ಒಳಗಾದರು. ಆಯ್ದ ಬ್ರ್ಯಾಂಡ್‌ಗಳು ಮುಗಿದ ಅನಂತರ ಸ್ಟಾಕ್ ಇರುವಂತಹ ಬ್ರ್ಯಾಂಡ್‌ಗಳನ್ನೇ ಮಾರಾಟ ಮಾಡಲಾಗುತ್ತಿತ್ತು. ತಮ್ಮಿಷ್ಟದ ಬ್ರ್ಯಾಂಡ್‌ಗಳು ದೊರೆಯದ ಕಾರಣಕ್ಕೆ, ಕಾದು ಸುಸ್ತಾದ ಕಾರಣಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ನಿಯಮ ಪಾಲಿಸದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.