Rule of Safety: ಖಾಸಗಿ ಅಷ್ಟೇ ಅಲ್ಲ, ಸರಕಾರಿ ಶಾಲೆಗಳಿಗೂ ʼಅಗ್ನಿ ಸುರಕ್ಷೆʼ ಬಿಸಿ

ಕರ್ನಾಟಕ ಹೈಕೋರ್ಟ್‌ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ ಸರಕಾರ,  ಖಾಸಗಿ ಶಾಲೆಗಳಲ್ಲಿ ಅಗ್ನಿ ಸುರಕ್ಷಾ ನಿಯಮಕ್ಕೆ ಆದೇಶಿಸಿದ್ದ ಸರಕಾರ

Team Udayavani, Jan 16, 2025, 7:40 AM IST

High–Gov-logo

ಬೆಂಗಳೂರು: ಖಾಸಗಿ ಶಾಲೆಗಳು ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮ ಮತ್ತು ಅಗ್ನಿ ಸುರಕ್ಷೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೊರಡಿಸಿದ್ದ ಸುತ್ತೋಲೆ ಈಗ ರಾಜ್ಯ ಸರಕಾರವನ್ನೇ ಅಡಕತ್ತರಿಯಲ್ಲಿ ಸಿಲುಕಿಸುವಂತೆ ಮಾಡಿದೆ.

ರಾಜ್ಯ ಸರಕಾರದ ಈ ಆದೇಶವನ್ನು ಸರಕಾರಿ ಶಾಲೆಗಳಿಗೂ ವಿಸ್ತರಿಸಿ ಹೈಕೋರ್ಟ್‌ ತೀರ್ಪು ನೀಡಿದೆ. ಈ ಆದೇಶವನ್ನು ಪಾಲನೆ ಮಾಡಲು ರಾಜ್ಯ ಸರಕಾರ 7ರಿಂದ 8 ಸಾವಿರ ಕೋಟಿ ರೂ. ಖರ್ಚು ಮಾಡಬೇಕಾಗಿರುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಕಷ್ಟಕ್ಕೆ ಕಾರಣ. ರಾಜ್ಯ ಸರಕಾರದ ಅಡಿ 47,276 ಶಾಲೆಗಳಿದ್ದು, ಬಹುತೇಕ ಯಾವುದೇ ಶಾಲೆಗಳೂ ರಾಷ್ಟ್ರೀಯ ಕಟ್ಟಡ ಸಂಹಿತೆ ಮತ್ತು ಅಗ್ನಿ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿಲ್ಲ. ವಾಸ್ತವದಲ್ಲಿ ತನ್ನ ಯಾವೆಲ್ಲ ಶಾಲೆಗಳು ಕಟ್ಟಡ ಸಂಹಿತೆ ಮತ್ತು ಅಗ್ನಿ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿವೆ ಎಂಬ ಮಾಹಿತಿಯೇ ಶಾಲಾ ಶಿಕ್ಷಣ ಇಲಾಖೆ ಬಳಿ ಇಲ್ಲ.

ಸಿಎಜಿ ವರದಿಯಲ್ಲೂ ಉಲ್ಲೇಖ
ಇಲಾಖೆಯ ಬಳಿ ಲಭ್ಯ ಇರುವ 2019-20ರ ಅವಧಿಯ ಮಾಹಿತಿಯ ಪ್ರಕಾರ ಅಂದು 44,424 ಸರಕಾರಿ ಶಾಲೆಗಳನ್ನು ಮೂಲಸೌಕರ್ಯದ ಲಭ್ಯತೆಯ ಆಧಾರದಲ್ಲಿ ಶ್ರೇಣೀಕರಣ ಮಾಡಲಾಗಿತ್ತು. ಬಳಿಕ ಇಂತಹ ಶ್ರೇಣೀಕರಣ ಪ್ರಯತ್ನ ನಡೆದಿಲ್ಲ. ಈ ಶ್ರೇಣೀಕರಣದ ಬಗ್ಗೆ ಅಧ್ಯಯನ ನಡೆಸಿದ್ದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ತಮ್ಮ “ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯ ವರದಿ’ಯಲ್ಲಿ ಅಗ್ನಿ ಸುರಕ್ಷೆ ಹಾಗೂ ಕಟ್ಟಡ ಸುರಕ್ಷೆ ಪ್ರಮಾಣ ಪತ್ರ ಇಲ್ಲದೆ ಸರಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಿದ್ದರು.

6 ವಾರಗಳ ಗಡುವಿನ ಬಿಸಿ
ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಸರಕಾರಿ ಶಾಲೆಗಳಲ್ಲಿ ಕಟ್ಟಡ ಸಂಹಿತೆ ಪಾಲನೆ ಮತ್ತು ಅಗ್ನಿಶಾಮಕ ಕ್ರಮಗಳ ಪಾಲನೆಯ ಬಗ್ಗೆ 6 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಮತ್ತು ಸುರಕ್ಷಾ ನಿಯಮಗಳ ಪಾಲನೆಯ ಬಗ್ಗೆ ಪೋರ್ಟಲ್‌ ರಚಿಸಿ ವಿವರ ಅಪ್‌ಲೋಡ್‌ ಮಾಡುವಂತೆ ಸೂಚಿಸಿದೆ. ಹಾಗೆಯೇ ನಿಯಮಗಳ ಪಾಲನೆ ಮಾಡಲು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ತನಕ ಸಮಯ ನೀಡಿದೆ.

7-8 ಸಾವಿರ ಕೋಟಿ ರೂ. ಬೇಕು !
ಕಟ್ಟಡ ಸಂಹಿತೆ ಮತ್ತು ಅಗ್ನಿಶಾಮಕ ಕ್ರಮಗಳ ಜಾರಿಗೆ ಪ್ರತೀ ಶಾಲೆಗೂ ಕನಿಷ್ಠ 15-20 ಲಕ್ಷ ರೂ. ಖರ್ಚಾಗಬಹುದು. ಅಂದರೆ 47 ಸಾವಿರ ಶಾಲೆಗೆ 7ರಿಂದ 8 ಸಾವಿರ ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಮೊತ್ತವನ್ನು ವಿನಿಯೋಗಿಸುವ ಸ್ಥಿತಿಯಲ್ಲಿ ರಾಜ್ಯ ಸರಕಾರವಿಲ್ಲ. ಆದ್ದರಿಂದ ಸದ್ಯ ಈ ಕ್ರಮಗಳ ಪಾಲನೆ ಅಸಾಧ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಶಿಕ್ಷಣ ಇಲಾಖೆಗೆ ಬಜೆಟ್‌ ಕೊರತೆ
ರಾಜ್ಯ ಶಿಕ್ಷಣ ಇಲಾಖೆಯ ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಶಿಕ್ಷಣಕ್ಕೆ ನೀಡಲಾಗಿತ್ತು. ಈ ಪೈಕಿ ಶೇ. 90ರಷ್ಟು ಹಣ ಸಂಬಳ ಮತ್ತು ಪಿಂಚಣಿಗೆ ಖರ್ಚಾಗುತ್ತಿದೆ. ಉಳಿದ ಶೇ. 10ರಷ್ಟು ಮೊತ್ತದಲ್ಲಿ ಮೂಲಸೌಕರ್ಯ ಸಂಬಂಧಿ ಚಟುವಟಿಕೆ ನಡೆಸಬೇಕಿದೆ.

ಶಾಲಾ ಸುರಕ್ಷಾ ಸಲಹಾ ಸಮಿತಿ ರಚನೆ ಆಗಿಲ್ಲ
ಶಾಲೆಗಳ ಸುರಕ್ಷೆಯ ಬಗ್ಗೆ ಶಿಕ್ಷಣ ಇಲಾಖೆಗೆ ಸಲಹೆ ನೀಡಲು ರಾಜ್ಯ ಮಟ್ಟದಲ್ಲಿ ಶಾಲಾ ಸುರಕ್ಷಾ  ಸಲಹಾ ಸಮಿತಿ ರಚಿಸಬೇಕಿತ್ತು. ಆದರೆ ರಾಜ್ಯದಲ್ಲಿ ಅಂತಹ ಸಮಿತಿಯನ್ನು ರಚಿಸಲು ಉದಾಸೀನ ತೋರಿರುವ ಸರಕಾರಕ್ಕೆ ಇದೀಗ 7-8 ಸಾವಿರ ಕೋಟಿ ರೂ. ಖರ್ಚು ಮಾಡಿ ಕಟ್ಟಡ ಸಂಹಿತೆಯ ಪ್ರಕಾರ ಶಾಲೆ ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆ ಶಿಕ್ಷಣ ತಜ್ಞರಲ್ಲಿ ಮೂಡಿದೆ.

ಏನಿದು ಸಮಸ್ಯೆ?
ಖಾಸಗಿ ಶಾಲೆಗಳಲ್ಲಿ ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮ ಮತ್ತು ಅಗ್ನಿ ಸುರಕಾ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ಅಲ್ಲದೆ ತಮಗೊಂದೇ ಏಕೆ ಈ ನಿಯಮ? ಸರಕಾರಿ ಶಾಲೆಗಳಿಗೂ ಅನ್ವಯವಾಗಲಿ ಎಂದು ವಾದಿಸಿತ್ತು. ಈ ವಾದವನ್ನು ಪುರಸ್ಕರಿಸಿದ್ದ ಹೈಕೋರ್ಟ್‌ ಸರಕಾರಿ ಶಾಲೆಗಳಿಗೂ ವಿಸ್ತರಿಸಿ ಆದೇಶಿಸಿತ್ತು.

ಏಕೆ ಸಂಕಷ್ಟ ?
ಖಾಸಗಿ ಶಾಲೆಗಳಿಗೆ ರೂಪಿಸಿದ್ದ ನಿಯಮ ಬಲೆಯಲ್ಲಿ ಬಿದ್ದ ಸರಕಾರ
ಸರಕಾರಿ ಶಾಲೆಗಳಿಗೂ ಅಗ್ನಿ ಸುರಕ್ಷೆ ವಿಸ್ತರಿಸಿದ ಹೈಕೋರ್ಟ್‌
ಕಟ್ಟಡ ಸಂಹಿತೆ, ಅಗ್ನಿ ಸುರಕ್ಷಾ ನಿಯಮ ಪಾಲನೆಗೆ ಬೇಕು 7-8 ಸಾವಿರ ಕೋಟಿ ರೂ.
ರಾಜ್ಯ ಸರಕಾರದ ಅಡಿ ಇರುವ 47,276 ಶಾಲೆಗಳು
ಅಗ್ನಿ ಸುರಕ್ಷಾ ನಿಯಮ ಪಾಲಿಸಲು ಪ್ರತಿ ಶಾಲೆಗೆ ಬೇಕು 15-20 ಲಕ್ಷ ರೂ.

ಸುರಕ್ಷಾ ಕ್ರಮಗಳು ಸರಕಾರಿ ಶಾಲೆಯಲ್ಲಿ ಇರಬೇಡವೇ? ಛಾವಣಿ ಕುಸಿಯುವುದು, ಕಾಂಪೌಂಡ್‌ ಬೀಳುವುದು, ಅಗ್ನಿ ಅವಘಡಗಳು ಹೆಚ್ಚಾಗಿ ನಡೆಯುತ್ತಿರುವುದು ಸರಕಾರಿ ಶಾಲೆಗಳಲ್ಲೇ. ಹಾಗಿದ್ದರೂ ಸರಕಾರಿ ಶಾಲೆಗಳನ್ನು ಸುರಕ್ಷಾ ನಿಯಮವಿಂದ ಕೈ ಬಿಟ್ಟಿರುವುದು ಏಕೆ? – ಬಿ.ಎನ್‌. ಯೋಗಾನಂದ, ಅಧ್ಯಕ್ಷ, ಕರ್ನಾಟಕ ಶಾಲಾ ಕಾಲೇಜು ಮಕ್ಕಳ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ

ಶಾಲೆಗಳ ಸುರಕ್ಷೆಯ ದೃಷ್ಟಿಯಿಂದ ಹೈಕೋರ್ಟ್‌ನ ತೀರ್ಪನ್ನು ಪಾಲಿಸುತ್ತೇವೆ. ನಮಗೆ ಕ್ರಿಯಾ ಯೋಜನೆ ಸಲ್ಲಿಸಲು 6 ವಾರಗಳ ಸಮಯ ನೀಡಿರುವುದು ಮತ್ತು ಶಾಲೆಗಳ ಸುರಕ್ಷೆಯ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಪೋರ್ಟಲ್‌ ಸ್ಥಾಪಿಸುವಂತೆ ಸೂಚಿಸಿರುವುದರಿಂದ ಶಾಲೆಗಳಲ್ಲಿ ಸುರಕಾ ಕ್ರಮಗಳು ಯಾವ ಮಟ್ಟದಲ್ಲಿ ಇದೆ ಎಂಬುದು ಶಾಲೆಗಳು ನೀಡುವ ಮಾಹಿತಿಯಿಂದ ಸ್ಪಷ್ಟವಾಗಲಿದೆ. – ಡಾ| ತ್ರಿಲೋಕಚಂದ್ರ, ಆಯುಕ್ತರು, ಶಾ. ಶಿ. ಇಲಾಖೆ

– ರಾಕೇಶ್‌ ಎನ್‌.ಎಸ್‌.

ಟಾಪ್ ನ್ಯೂಸ್

BBK11: ಹನುಮಂತುಗೆ 5 ಕೋಟಿ ವೋಟ್ಸ್‌ ಕೂಡ ಕಡಿಮೆನೇ.. ತ್ರಿವಿಕ್ರಮ್

BBK11: ಹನುಮಂತುಗೆ 5 ಕೋಟಿ ವೋಟ್ಸ್‌ ಕೂಡ ಕಡಿಮೆನೇ.. ತ್ರಿವಿಕ್ರಮ್

ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

Mangaluru: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ…

Mangaluru: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ…

Singer Manjamma: ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

Singer Manjamma: ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು

ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು

ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ

ಈ ಜಾಗ ನಮ್ಮದು… ವಿದ್ಯಾರ್ಥಿಗಳನ್ನು ಹೊರಹಾಕಿ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಕುಟುಂಬ

ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ

ಮೈಕ್ರೋ ಫೈನಾನ್ಸ್ ಗಳಿಂದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubballi: ಚಾಕು ಇರಿತ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

BBK11: ಹನುಮಂತುಗೆ 5 ಕೋಟಿ ವೋಟ್ಸ್‌ ಕೂಡ ಕಡಿಮೆನೇ.. ತ್ರಿವಿಕ್ರಮ್

BBK11: ಹನುಮಂತುಗೆ 5 ಕೋಟಿ ವೋಟ್ಸ್‌ ಕೂಡ ಕಡಿಮೆನೇ.. ತ್ರಿವಿಕ್ರಮ್

ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಚಿನ್ನ ಕಸಿಯಲು ಬಂದ ದುಷ್ಕರ್ಮಿಯಿಂದ ಮಹಿಳೆಗೆ ರಾಡ್ ನಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

Mangaluru: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ…

Mangaluru: ನೆತ್ತರಕೆರೆ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿ ಅಗ್ನಿ ಅವಘಡ…

Singer Manjamma: ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

Singer Manjamma: ʼಸರಿಗಮಪʼ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು

ಬಾಣಂತಿಯರ ಸಾವಿನ ಪ್ರಕರಣ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.