Advertisement

ಅಪಾಯಕ್ಕೆ ಆಹ್ವಾನ ನೀಡುವ ತಾಪಂ ಕಟ್ಟಡ

03:06 PM May 28, 2022 | Team Udayavani |

ಎಚ್‌.ಡಿ.ಕೋಟೆ: ಕಳಚಿ ಬೀಳುವ ಮೇಲ್ಛಾವಣಿ, ಶಿಥಿಲಾವಸ್ಥೆಯ ಓಬಿರಾಯನ ಕಾಲದಕಟ್ಟಡದಲ್ಲಿಯೇ ಜೀವದ ಹಂಗು ತೊರೆದು ನಿತ್ಯಕರ್ತವ್ಯ ನಿರ್ವಹಿಸುತ್ತಿರುವ ನೌಕರರು. ಇದು ಎಚ್‌.ಡಿ.ಕೋಟೆ ತಾಲೂಕು ಕೇಂದ್ರಸ್ಥಾನದ ತಾಲೂಕು ಪಂಚಾಯಿತಿ ಶಿಥಿಲಾವಸ್ಥೆಯ ಕಟ್ಟಡದ ಕಥೆವ್ಯಥೆ.

Advertisement

ಯಾವಾಗ ಎಲ್ಲಿ ಕಟ್ಟಡದ ಮೇಲ್ಛಾವಣಿ ಕಳಚಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಲೆ ಮೇಲೆ ಬಿದ್ದುಏನು ಅನಾಹುತವಾಗುವುದೋ ಅನ್ನುವ ಭೀತಿಸಿಬ್ಬಂದಿಯನ್ನು ಕಾಡುತ್ತಿದೆಯಾದರೂ ಕಂಡೂಕಾಣದಂತೆ ಜೀವದ ಹಂಗು ತೊರೆದು ಕಳಚಿಬೀಳುವ ಕಟ್ಟಡದ ಮೇಲ್ಛಾವಣಿಯ ತಳಭಾಗದಲ್ಲಿಕುಳಿತು ಜೀವ ಕೈಯಲ್ಲಿಡಿದುಕೊಂಡು ದಿನ ಕಳೆಯುವ ಸ್ಥಿತಿ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.

 ತೀರ ಶಿಥಿಲಗೊಂಡಿರುವ ಕಟ್ಟಡ: ಇಡೀ ತಾಲೂಕಿನ ಎಲ್ಲಾ ಗ್ರಾಪಂಗಳ ನಿಯಂತ್ರಿಸುವಕೇಂದ್ರ ಸ್ಥಾನವೆನಿಸಿ ಕೊಂಡಿರುವ ತಾಪಂ ಕಚೇರಿತೀರ ಹಳೆಯದಾಗಿದೆ. ಬಹುವರ್ಷಗಳುಉರುಳಿರುವುದರಿಂದ ಕಟ್ಟಡ ಸಂಪೂರ್ಣವಾಗಿಶಿಥಿಲಗೊಂಡು ಕುಸಿದು ಬೀಳುವ ಹಂತ ತಲುಪಿದೆ.ಇಷ್ಟಾದರೂ ಕಟ್ಟಡ ಸ್ಥಳಾಂತರಕ್ಕೆ ತಾಲೂಕು ಮತ್ತುಜಿಲ್ಲಾ ಆಡಳಿತ ಕ್ರಮ ವಹಿಸಿದೇ ಇರುವುದು ವಿಪರ್ಯಾಸ.

ಅವಘಢ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ:ಕಚೇರಿ ಗೋಡೆಗಳು ಮಳೆಯ ನೀರಿನತೇವಾಂಶದಿಂದ ಪಾಚಿ ಹಿಡಿದು ಅಲ್ಲಲ್ಲಿ ಬಾಯ್ತೆರೆದು ಬಿರುಕು ಬಿಟ್ಟಿವೆ. ಇನ್ನು ಕಟ್ಟಡಗಳಮೇಲ್ಛಾವಣಿಯಂತೂ ಬಹು ವರ್ಷಗಳಹಿಂದಿನಿಂದ ಕಳಚಿ ಬೀಳಲಾರಂಭಿಸಿದೆಯಾದರೂಇತ್ತೀಚಿನ ದಿನಗಳಲ್ಲಿ ಸೀಲಿಂಗ್‌ ಕಳಚಿ ಬೀಳುವಪ್ರಮಾಣ ಹೆಚ್ಚಾಗಿದೆ. ಈ ಕಟ್ಟಡಗಳ ಒಳಗೆ ಕುಳಿತುಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದ್ದುಅವಘಢ ಸಂಭವಿಸಿದಾಗ ಅನುಕಂಪದ ಮಾತನಾಡಿಪರಿಹಾರ ನೀಡುವ ಸರ್ಕಾರ ಕೂಡಲೆ ಇತ್ತ ಗಮನಹರಿಸಿ ನೌಕರರಿಗೆ ವ್ಯವಸ್ಥಿತ ಮತ್ತು ಸುರಕ್ಷಿತ ಕಟ್ಟಡಕ್ಕೆ ಸ್ಥಳಾಂತರಿಸುವ ಕೆಲಸವಾಗಬೇಕಿದೆ.

ಎರಡು ವರ್ಷಗಳು ಕಳೆಯುತ್ತಿದ್ದರೂ  ಪೂರ್ಣವಾಗದ ಬಿಲ್ಡಿಂಗ್‌ ಕಾಮಗಾರಿ: ಕಟ್ಟಡದ ದುಸ್ಥಿತಿ ಕಂಡ ಆಗಿನ ಸಂಸದ ಆರ್‌. ಧ್ರುವನಾರಾಯಣ್‌ ತ್ವರಿತಗತಿಯಲ್ಲಿ ನೂತನ ಕಟ್ಟಡನಿರ್ಮಿಸಿ ಹಳೆಯ ಕಟ್ಟಡ ಸ್ಥಳಾಂತರಿಸಲು ಸೂಚನೆನೀಡಿ ನೂತನ ಕಟ್ಟಡದ ಕಾಮಗಾರಿಗೆ ಸೂಚನೆ ನೀಡಿದ್ದರು. ಅದರಂತೆಯೇ 1.98 ಕೋಟಿ ರೂ.ಅಂದಾಜು ವೆಚ್ಚದ ನೂತನ ತಾಲೂಕು ಪಂಚಾಯಿತಿ ಕಟ್ಟಡದ ಕಾಮಗಾರಿಗೆ ಚಾಲನೆ ಕೂಡ ದೊರೆತು ಕಾಮಗಾರಿ ಕೂಡ ಆರಂಭಗೊಂಡಿತ್ತು.

Advertisement

18 ತಿಂಗಳಾದ್ರೂ ಪೂರ್ಣಗೊಳ್ಳದ ಕಟ್ಟಡದ ಕಾಮಗಾರಿ: ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡು ಸುಮಾರು 18 ತಿಂಗಳುಗಳು ಕ್ರಮಿಸಿವೆಯಾದರೂ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಲ್ಯಾಂಡ್‌ ಆರ್ಮಿ ಗುತ್ತಿಗೆ ಪಡೆದುಕೊಂಡು ಕಾಮಗಾರಿ ಆರಂಭಿಸಿ ಇಲ್ಲಿಯ ತನಕ 1.26 ಕೋಟಿ ಜಿಪಂನಿಂದಪಾವತಿಯಾಗಿದೆಯಾದರೂ ಬಾಕಿ 60 ಲಕ್ಷ ನೀಡಿಲ್ಲಅನ್ನುವ ಕಾರಣದಿಂದ ಕಟ್ಟಡದ ಬಹುತೇಕಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನುಉಳಿದಿರುವ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಲ್ಯಾಂಡ್‌ಆರ್ಮಿ ಹಿಂದೇಟು ಹಾಕುತ್ತಿದೆ.

ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚರವಹಿಸಿ : ಅವಘಢ ಸಂಭವಿಸಿ ಅನಾಹುತವಾಗುವ ಮುನ್ನ ಸಂಬಂಧ ಪಟ್ಟ ತಾಲೂಕಿನ ಶಾಸಕರು, ಚುನಾಯಿತ ಪ್ರತಿನಿಧಿಗಳು, ತಾಲೂಕು ಅಧಿಕಾರಿಗಳು ಜರೂರಾಗಿ ಇತ್ತ ಗಮನ ಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಹಳೆಯ ಕಟ್ಟಡದ ಸಿಬ್ಬಂದಿ ತಕ್ಷಣದಲ್ಲಿ ಸ್ಥಳಾಂತರಿಸದೇ ಇದರೆ ಇನ್ನೇನು ಸೋನೆ ಮಳೆ ಆರಂಭಗೊಂಡಾಗ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಟ್ಟಡದಿಂದ ಏನಾದರೂ ಅನಾಹುತ ಸಂಭವಿಸಿದರೆ ಪ್ರಾಣಹಾನಿಯಾಗುವ ಸಾಧ್ಯತೆ ಇದೆ. ಜೀವ ಉಳಿಸಬೇಕೆನ್ನುವ ಹೊಣೆಗಾರಿಕೆ ಇದ್ದರೆ ಸಂಬಂಧ ಪಟ್ಟವರು ಕೂಡಲೆ ಇತ್ತ ಗಮನ ಹರಿಸಿ ಸಮಸ್ಯೆ ಸರಿಪಡಿಸಲು ಮುಂದಾಗಿ.

ಹಳೆಯ ತಾಪಂ ಕಟ್ಟಡ ತೀರಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಇನ್ನು 61 ಲಕ್ಷ ಬಾಕಿ ಪಾವತಿಸಬೇಕಿದೆ. ಕೂಡಲೆ ಜಿಪಂ ಇತ್ತ ಗಮನ ಹರಿಸಿ ಹಣಬಿಡುಗಡೆಗೊಳಿಸಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದರೆ ಆಡಳಿತ ವ್ಯವಸ್ಥೆ ಸ್ಥಳಾಂತರಿಸಲು ಅನುಕೂಲವಾಗುತ್ತದೆ. -ಜೆರಾಲ್ಡ್‌ ರಾಜೇಶ್‌, ಇಒ ತಾಪಂ

ಶಿಥಿಲಾವಸ್ಥೆ ಕಟ್ಟಡದ ವ್ಯವಸ್ಥೆ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಕಣ್ಣಾರ ಕಂಡಾಗ ಕೆಲಸವೇ ಬೇಡ ಸದ್ಯ ಜೀವಉಳಿಸಿಕೊಂಡರೆ ಸಾಕು ಅನಿಸುತ್ತದೆ. ಮನೆಯಕಷ್ಟ ಕಂಡಾಗ ಜೀವ ಹೋದರೂ ಚಿಂತೆ ಇಲ್ಲಕರ್ತವ್ಯ ನಿರ್ವಹಿಸಬೇಕು ಅನಿಸುತ್ತದೆ. ಹೀಗೆಪ್ರತಿದಿನ ಕರ್ತವ್ಯಕ್ಕೆ ಹಾಜರಾದಾಗಿನಿಂದಕಟ್ಟಡದಿಂದ ಹೊರ ನಿರ್ಗಮಿಸುವ ತನಕ ಜೀವಕೈಯಲ್ಲಿಡಿದುಕೊಂಡು ದಿನ ಕಳೆಯುತ್ತಿದ್ದೇವೆ. ದಯವಿಟ್ಟು ಕಚೇರಿ ಸ್ಥಳಾಂತರಿಸಿ ಸಿಬ್ಬಂದಿ ಜೀವ ಉಳಿಸಿ. -ಹೆಸರು ಹೇಳಲು ಇಚ್ಚಿಸದ ತಾಪಂ ಸಿಬ್ಬಂದಿ

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next