ಬಂದಾನ ಹಕ್ಕಿಗಳು ಮರಿಮಾಡುವ ಸಮಯದಲ್ಲಿ, ಹೆಣ್ಣು ಹಕ್ಕಿಯ ಮರದ ಪೊಟರೆಯಲ್ಲಿ ಬಂದಿಯಾಗಿರುತ್ತದೆ. Rufous-necked Hornbill (Aceros nipalen) (Hodgson) R Vulture +- ಮಣ್ಣು, ಹಣ್ಣಿನ ಸಿಪ್ಪೆ ಸೇರಿಸಿ, ಹೆಣ್ಣು ಗೂಡಿನ ಒಳಸೇರಿ ಮೊಟ್ಟೆ ಇಟ್ಟು ಕಾವು ಕೊಡುತ್ತದೆ. ಆನಂತರ ಮರಿ ಬಲಿತು ದೊಡ್ಡದಾಗುವವರೆಗೂ ಗಂಡು ಹಕ್ಕಿ -ಹೆಣ್ಣಿಗೆ ಮತ್ತು ಮರಿಗಳಿಗೆ ಆಹಾರ ಪೂರೈಸುವುದು ವಿಶೇಷ. ಈ ಕ್ರಿಯೆಯನ್ನು ಆಧರಿಸಿ ಈ ಹಕ್ಕಿಗೆ ‘ಬಂದಾನ ಹಕ್ಕಿ’ ಎಂಬ ಹೆಸರುಬಂದಿದೆ.
ಈ ಜಾತಿಯ ಹಕ್ಕಿಗೆ ಹಳ್ಳಿಗರು ಇಟ್ಟ ಹೆಸರು ‘ಮಳೆ ಹಕ್ಕಿ’. ಮಾನ್ಸೂನ್‌ನ ಆಗಮನವಾಗುತ್ತಿದ್ದಂತೆ ಈ ಹಕ್ಕಿಯ ಚಲನ ವಲನ ಹೆಚ್ಚು. ಮರಿಮಾಡಲು ತಯಾರಿ ನಡೆಸುತ್ತಾ ಬಸ್, ಬಸ್ ಎಂದು ಸಪ್ಪಳ ಮಾಡುತ್ತಾ, ಈ ಹಕ್ಕಿಯ ಹಾರಾಟ ಹೆಚ್ಚಾಗುತ್ತದೆ. ಅದರಿಂದ ಈ ಹಕ್ಕಿಗೆ -ಮಳೆ ಹಕ್ಕಿ ‘ಕೂಗಲಹಕ್ಕಿ’ ಅಂತಲೂ ಹೆಸರಿದೆ.
ಕೇಸರಿ ಬಣ್ಣದ ಕುತ್ತಿಗೆ ಹೊಂದಿರುವ ಕೂಗಲ ಹಕ್ಕಿಗೆ -ದೊಡ್ಡ ಕೊಂಬಿನಂಥ ದಪ್ಪ ಮತ್ತು ದೊಡ್ಡ ಕ್ರೀಂ ಬಣ್ಣದ ಚುಂಚು ಇದೆ. ಅದರ ಬುಡದಲ್ಲಿ ಕಚ್ಚಿನಂತೆ ಭಾಸವಾಗುವಂತಿದ್ದು, ಕಪ್ಪು ಬಣ್ಣದಿಂದ ಕೂಡಿದೆ. ಈ ಗುರುತು -ಇದರ ಪ್ರಾಯದ ಸಂಕೇತ. ಈ ಗುರುತನ್ನ ಆದರಿಸಿ ಈ ಹಕ್ಕಿಯ ವಯಸ್ಸನ್ನು ತಿಳಿಯಬಹುದು. ಇದೇ ಗುಂಪಿನ ಒಂದು ಉಪಜಾತಿಯ ಹಕ್ಕಿ -ಪೈಯ್ಡ ಹಾರ್ನ ಬಿಲ್. ಕೇಸರಿ ಬಣ್ಣದ ಕುತ್ತಿಗೆಯ ಬಂದಾನ ಹಕ್ಕಿಯ ಚುಂಚಿನ ಮೇಲೆ ಹೆಚ್ಚು ಕಚ್ಚು ಇದ್ದರೆ ಇದರ ವಯಸ್ಸು ಹೆಚ್ಚು ಎಂದು ಅರ್ಥ. ದೊಡ್ಡ ಕೊಂಬು ಚುಂಚಿನ ಹಕ್ಕಿ ಹಾರ್ನ್ಬಿಲ್-ಉಪ ಜಾತಿಯಾದ ‘ಬ್ಯುಸೆರೊಟಿನ್’ ಗುಂಪಿಗೆ ಸೇರಿದೆ. ಈ ಗುಂಪಿನಲ್ಲಿ 10, ಸಾವಿರಕ್ಕಿಂತ ಹೆಚ್ಚು ಹಕ್ಕಿಗಳಿವೆ. ಈ ಹಕ್ಕಿ 117 ರಿಂದ 122ಸೆಂಮೀ ಉದ್ದವಿದೆ. ಗಂಡು ಹಕ್ಕಿಗೆ ತಲೆ, ಕುತ್ತಿಗೆ, ಎದೆ, ಹೊಟ್ಟೆ, ಕೇಸರಿ ಬಣ್ಣ ಇದೆ. ಕಣ್ಣಿನ ಸುತ್ತಲೂ ನೀಲಿ ವರ್ತುಲ ಇದೆ. ದೊಡ್ಡ ಕಣ್ಣು, ಚುಂಚಿನ ಬುಡದಲ್ಲಿ ನೀಲಿ ರೇಖೆ ಇದ್ದು ಹಸಿರು ಮಿಶ್ರಿತ ಹೊಳೆವ ಕಪ್ಪು ಮೈಬಣ್ಣದಿಂದ ಕೂಡಿದೆ. ಉದ್ದ ಬಾಲದ ಗರಿಯ ಅರ್ಧದಷ್ಟು ಕಪ್ಪಿದ್ದು -ತುದಿಯ ಅರ್ಧಭಾಗ ಬೆಳ್ಳಗಿದೆ. ದಂತ ವರ್ಣದ ದೊಡ್ಡ, ದಪ್ಪ ಚುಂಚಿದೆ. ಗಂಡು-ಹೆಣ್ಣು ಜೊತೆಯಾಗಿ ಜೀವನ ಪರ್ಯಂತ ಇರುತ್ತದೆ. ಗಂಡು ಹಕ್ಕಿಯ ಮೈ ಬಣ್ಣ ಹಸಿರು ಮಿಶ್ರಿತ ಕಪ್ಪು ಬಣ್ಣ ಇದೆ. ಉದ್ದ ಪುಕ್ಕದ ತುದಿಯ ಅರ್ಧ
ಭಾಗದಷ್ಟು ಮಾತ್ರ ಬಿಳಿ ಗರಿ ಇದೆ. ಗಂಡು ಮತ್ತು ಹೆಣ್ಣು ಹಕ್ಕಿಗೆ ಚುಂಚಿನ ಬುಡದಲ್ಲಿ-ಕುತ್ತಿಗೆ ಮುಂಭಾಗದಲ್ಲಿ -ಕೇಸರಿ ಬಣ್ಣದ ಕುತ್ತಿಗೆ ಚೀಲವಿರುತ್ತದೆ. ಹೆಣ್ಣು ಹಕ್ಕಿಯ ಕಣ್ಣಿನ ಸುತ್ತ ನೀಲಿ ಬಣ್ಣದ ವರ್ತುಲ ಇದೆ. ಇದರಿಂದ ಹೆಣ್ಣು-ಗಂಡನ್ನು ಪ್ರತ್ಯೇಕವಾಗಿ ಸುಲಭವಾಗಿ ಗುರುತಿಸಲು ಸಾಧ್ಯವಾಗಿದೆ.
ಇದು ಮನೆ ಕಟ್ಟುವ ರೀತಿಯ ಬಹಳ ಚೆನ್ನ.
ದೊಡ್ಡ ಮರದ ಪೊಟರೆಯನ್ನು ಆರಿಸಿ, ಮಣ್ಣು ಮತ್ತು ಹಣ್ಣಿನ ಚರಟ ಉಪಯೋಗಿಸಿ ದ್ವಾರವನ್ನು ತಯಾರು ಮಾಡುತ್ತದೆ. ಹೆಣ್ಣು ಹಕ್ಕಿ ಅದರ ಒಳಸೇರಿ ಮೊಟ್ಟೆ ಇಟ್ಟ ನಂತರ ಗಂಡು-ಆದ್ವಾರಕ್ಕೆ ಹಣ್ಣಿನ ಚರಟ, ಮಣ್ಣು ಸೇರಿಸಿ ಮೆತ್ತಿ ಬಾಗಿಲು ಮುಚ್ಚುತ್ತದೆ. ನಂತರ ತಾನು ಓಡಾಡಲು ಸಾಧ್ಯಾವಾಗುವಷ್ಟು ಅಡಿ ಮಾಡಿಕೊಂಡು, ಅದರ ಮೂಲಕ ಹೆಣ್ಣಿಗೆ ಮತ್ತು ಮರಿಗಳಿಗೆ ಹಣ್ಣು- ಆಲ, ಬಸುರಿ, ಉಣಚಿ, ಹಣ್ಣುಗಳನ್ನು ತನ್ನ ಚುಂಚಿನ ತುದಿಗೆ ಸಿಕ್ಕಿಸಿಕೊಂಡು ಚಿಕ್ಕ ದ್ವಾರದ ಮೂಲಕ ಗೂಡಿನ ಒಳಕ್ಕೆ ಎಸೆಯುತ್ತದೆ.
ಹೀಗೆ ಹೆಣ್ಣು ಅಜಾnತವಾಸದಲ್ಲೇ ಮೊಟ್ಟೆಗೆ ಕಾವುಕೊಟ್ಟು, ನಾಲ್ಕೈದು ತಿಂಗಳಲ್ಲಿ ಮರಿಯನ್ನು ದೊಡ್ಡದು ಮಾಡುತ್ತದೆ. ಇಷ್ಟು ದೀರ್ಘ ಸಮಯ ಹೆಣ್ಣನ್ನು-ಗಂಡು ಆರೈಕೆ ಮಾಡುತ್ತದೆ. ದೊಡ್ಡ ಮರಗಳಿರುವ ಪರ್ವತ ಪ್ರದೇಶದಲ್ಲಿ ಭಾರತದ ನೇಪಾಳ, ಭೂತಾನ್, ಥೈಲಾಂಡ್, ವಿಯೆಟ್ನಾಂನಲ್ಲಿ ಸಹ ಕಾಣುವುದು. ತಾಲ್ ಮತ್ತು ಹಿಮಾಲಯದ ಕಾಡಿನಲ್ಲಿ ಕಾಣಸಿಗುತ್ತದೆ. ಕಾಡಿನ ನಾಶ, ಅರುಣಾಚಲ ಪ್ರದೇಶದಲ್ಲಿರುವ ಗಿರಿಜನ, ಬುಡಕಟ್ಟು ಜನಾಂಗದದವರು ಚುಂಚು ಮತ್ತು ಗರಿಗಳಿಗಾಗಿ ಇದನ್ನು ಬೇಟೆಯಾಡುತ್ತಾರೆ. ಈ ಪಕ್ಷಿಯ ಸಂಖ್ಯೆ ಕ್ಷೀಣಿಸಲು ಇದು ಮುಖ್ಯ ಕಾರಣ.
ಪಿ.ವಿ.ಭಟ್ ಮೂರೂರು