Advertisement

IAF: ರುದ್ರಾ ಹೆಲಿಕಾಪ್ಟರ್‌ ಪರೀಕ್ಷೆ ಯಶಸ್ವಿ

08:45 PM Nov 05, 2023 | Team Udayavani |

ನವದೆಹಲಿ: ಭಾರತೀಯ ಸೇನೆಯ ವೈಮಾನಿಕ ಘಟಕವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ರುದ್ರಾ ಹೆಲಿಕಾಪ್ಟರ್‌ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

Advertisement

ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌) ಈ ರುದ್ರಾ ಹೆಲಿಕಾಪ್ಟರ್‌ಗಳ ವಿನ್ಯಾಸ ಹಾಗೂ ಅಭಿವೃದ್ಧಿ ಮಾಡಿದೆ. ರುದ್ರಾ ಹೆಲಿಕಾಪ್ಟರ್‌ ಮೂಲಕ ಹೊಸ ಪೀಳಿಗೆಯ ರಾಕೆಟ್‌ ಹಾಗೂ ಟರ್ರೆಟ್‌ ಮತ್ತು ಮದ್ದು-ಗುಂಡುಗಳ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ನಿಖರ ಗುರಿಯ ಮೇಲೆ ಉಕ್ಕು ಮತ್ತು ಬೆಂಕಿಯ ಮಳೆಯನ್ನು “ರುದ್ರಾ” ಸುರಿಸಿದ್ದಾನೆ.

ಈಶಾನ್ಯ ಭಾರತದ ಬೆಟ್ಟವೊಂದರಲ್ಲಿ ರುದ್ರಾ ಹೆಲಿಕಾಪ್ಟರ್‌ ಪರೀಕ್ಷೆ ನಡೆಸಿದ ವಿಡಿಯೋವನ್ನು ಟ್ವಿಟರ್‌(ಎಕ್ಸ್‌)ನಲ್ಲಿ ಭಾರತೀಯ ಸೇನೆ ಹಂಚಿಕೊಂಡಿದೆ. ರಾಕೆಟ್‌ಗಳು ಹಾಗೂ ಮದ್ದು-ಗುಂಡುಗಳನ್ನು ಹೊತ್ತ ಮೂರು ರುದ್ರಾ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದವು. ಇವು ಗುರಿಯ ಮೇಲೆ ನಿಖರ ದಾಳಿ ನಡೆಸಿದವು.

ರುದ್ರಾ ಹೆಲಿಕಾಪ್ಟರ್‌ 5.8 ಟನ್‌ ತೂಕವಿದೆ. ಟ್ಯಾಂಕ್‌ಗಳನ್ನು ನಾಶಪಡಿಸುವುದು, ಮುಂಚೂಣಿಯಲ್ಲಿದ್ದು ಪಡೆಗೆ ಬೆಂಬಲ ನೀಡುವುದು ಹಾಗೂ ಸಶಸ್ತ್ರ ವಿಚಕ್ಷಣ ಮತ್ತು ಕಣ್ಗಾವಲು ನಡೆಸುವುದು ಇದರ ಪ್ರಮುಖ ಪಾತ್ರವಾಗಿದೆ. 20 ಎಂಎಂ ಟರ್ರೆಟ್‌ ಗನ್‌,70 ಎಂಎಂ ರಾಕೆಟ್‌ ಹಾಗೂ ಆಕಾಶದಿಂದ ಆಕಾಶಕ್ಕೆ ನೆಗೆಯುವ ಕ್ಷಿಪಣಿಗಳನ್ನು ಹೊತ್ತೂಯುವ ಸಾಮರ್ಥ್ಯವನ್ನು ರುದ್ರಾ ಹೆಲಿಕಾಪ್ಟರ್‌ಗಳು ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next