Advertisement

ಸಿಬಂದಿ ಜತೆಗೆ ಅಸಭ್ಯ ವರ್ತನೆ: ಇಬ್ಬರು ವಿದೇಶಿಗರ ಪ್ರಯಾಣಕ್ಕೆ ತಡೆ

01:03 AM Jan 08, 2023 | Team Udayavani |

ಮುಂಬಯಿ: ಗೋವಾದಿಂದ ಮುಂಬಯಿಗೆ ಗೋ ಏರ್‌ ವಿಮಾನದಲ್ಲಿ ತೆರಳುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳ ಪ್ರಯಾಣಕ್ಕೆ ತಡೆಯೊಡ್ಡಲಾಗಿದೆ. ವಿಮಾನದ ಮಹಿಳಾ ಸಿಬಂದಿಯ ಜತೆಗೆ ಅವರು ಅಸಭ್ಯ ವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಈ ಬೆಳವಣಿಗೆಯನ್ನು ಗೋ ಏರ್‌ನ ವಕ್ತಾರರು ಶನಿವಾರ ಖಚಿತಪಡಿಸಿದ್ದಾರೆ. ಇದರ ಜತೆಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ಕ್ಕೂ ಘಟ ನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅನುಚಿತವಾಗಿ ವರ್ತಿಸಿದ ಘಟನೆ ಶುಕ್ರವಾರ ನಡೆದಿದೆ. ವಿದೇಶಿ ಪ್ರಯಾಣಿಕರಿಬ್ಬರು ಸಿಬಂದಿಯ ವಿರುದ್ಧ ಅವಹೇಳನಕಾರಿಯಾಗಿ ಮಾತುಗಳನ್ನಾಡುತ್ತಿದ್ದರು. ಅವರ ವರ್ತನೆಗೆ ಸಹ ಪ್ರಯಾಣಿಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ ಬಳಿಕ ಅವರನ್ನು ವಿಮಾನದಿಂದ ಕೆಳಗೆ ಇಳಿಸಲು ತೀರ್ಮಾನಿಸಲಾಯಿತು.

ಏರ್‌ ಇಂಡಿಯಾದಲ್ಲಿ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿರುವಂತೆಯೇ ಹೊಸ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next