Advertisement

ಮಕ್ಕಳ ಮನಸ್ಸುಗಳ ಸುತ್ತ ‘ರೂಬಿಕ್ಸ್’

05:26 PM Oct 03, 2022 | Team Udayavani |

ಮಕ್ಕಳ ಮನಸ್ಸುಗಳನ್ನೇ ಮೂಲವಾಗಿಟ್ಟುಕೊಂಡು “ರೂಬಿಕ್ಸ್‌’ ಎಂಬ ಸಿನಿಮಾವೊಂದು ತಯಾರಾಗುತ್ತಿದೆ ವೈವಿಧ್ಯಮಯ ಪ್ರಶ್ನೆಗಳು ಒಟ್ಟಿಗೆ ಮಕ್ಕಳ ಮನಸ್ಸಿನಲ್ಲಿ ಬಂದರೆ ಏನಾಗುತ್ತದೆ ಎಂಬ ವಿಷಯ ಹೊಂದಿರುವ ಚಿತ್ರವೇ “ರೂಬಿಕ್ಸ್‌’. ಈ ಸಿನಿಮಾದಲ್ಲಿ ಮಾಸ್ಟರ್‌ ಸಾತ್ವಿಕ್‌ ಎಂಬ ಬಾಲಕ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ರಂಜಿತ್‌ ಕುಮಾರ್‌ ಗೌಡ “ರೂಬಿಕ್ಸ್‌’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರಂಜಿತ್‌, “ರೂಬಿಕ್ಸ್‌ ಎಂಬುದನ್ನು ಸಾಂಕೇತಿಕವಾಗಿ ಈ ಸಿನಿಮಾಗೆ ಇಟ್ಟಿದ್ದೇವೆ. ಮಗುವಿನ ತಲೆಯಲ್ಲಿ ಅಷ್ಟೂ ಪ್ರಶ್ನೆಗಳು ಹುಟ್ಟಿದಾಗ ಏನಾಗುತ್ತದೆ ಎಂಬುದೇ ನಮ್ಮ ಸಿನಿಮಾದ ಒಟ್ಟಾರೆ ಸಾರಾಂಶ. ಮಕ್ಕಳು ಬುದ್ಧಿವಂತರಾಗಿರಲಿ ಎಂದುಕೊಳ್ಳುತ್ತೇವೆ. ಇಷ್ಟೊಂದು ಬುದ್ಧಿವಂತಿಕೆಯ ಮಕ್ಕಳು ನಮ್ಮ ಸುತ್ತ ಇದ್ದಾಗ ಸಮಾಜದಲ್ಲಿ ಪೋಷಕರು ಎಂತಹ ಪ್ರಶ್ನೆಗಳನ್ನು ಅವರಿಂದ ನಿರೀಕ್ಷಿಸಬಹುದು ಎಂಬ ಅಂಶವನ್ನು ಸಹ ಹೇಳಲಾಗಿದೆ’ ಎನ್ನುವುದು ಅವರ ಮಾತು.

ಚಿತ್ರದಲ್ಲಿ ಮಾಸ್ಟರ್‌ ಹರಿಕೃಷ್ಣ, ಶಂಕರ್‌ ಜಗನ್ನಥ್‌, ರಾಜು ಬೈ , ಮಾಣಿಕ್ಯ ಜಿ.ಎನ್‌, ವಿಕ್ರಾಂತ್‌ ಅರಸ್‌, ಅನಿಕಾ ರಮ್ಯ ಮತ್ತಿತರರು ಇದರಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಫ‌ಸ್ಟ್‌ ಲುಕ್‌ ಪೋಸ್ಟರನ್ನು ಜನಸ್ನೇಹಿ ನಿರಾಶ್ರೀ‌ರ ಆಶ್ರಮದ ಮಕ್ಕಳಿಂದ ಇತ್ತೀಚೆಗೆ ಬಿಡುಗಡೆ ಮಾಡಿಸಲಾಯಿತ್ತು. ಈಗಾಗಲೇ ಶೇ. 70 ರಷ್ಟು ಚಿತ್ರೀಕರಣ ಕಂಪ್ಲೀಟ್‌ ಆಗಿದೆ. ಶೈಲಜಾ ಪ್ರಕಾಶ್‌ರವರು ಚಿತ್ರಕ್ಕೆ ಬಂಡವಾಳ ಹೊಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next