Advertisement

ರಬ್ಬರ್‌ ಉತ್ಪಾದನೆ ವೆಚ್ಚ 174 ರೂ.; ಕೃಷಿಕನಿಗೆ ಕೇವಲ 125 ರೂ.

06:00 AM Jun 23, 2018 | Team Udayavani |

ಕಾಸರಗೋಡು: ರಬ್ಬರ್‌ ಕೃಷಿಕನಿಗೆ ರಬ್ಬರ್‌ ಉತ್ಪಾದನೆ ವೆಚ್ಚದಷ್ಟೂ ಹಣ ಲಭಿಸದಿರುವುದರಿಂದ ರಬ್ಬರ್‌ ಕೃಷಿಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಒಂದು ಕಿಲೋ ರಬ್ಬರ್‌ ಉತ್ಪಾದಿಸಲು 174 ರೂಪಾಯಿ ಬೇಕಾಗಿದ್ದರೆ, ಒಂದು ಕಿಲೋ ರಬ್ಬರ್‌ಗೆ ಕೃಷಿಕನಿಗೆ ಲಭಿಸುವುದು ಕೇವಲ 125 ರೂ. ಅಂದರೆ ಒಂದು ಕಿಲೋ ರಬ್ಬರ್‌ನಲ್ಲಿ ಕೃಷಿಕನಿಗೆ 49 ರೂ. ನಷ್ಟ ಸಂಭವಿಸುತ್ತದೆ. ಈ ಹಿನ್ನೆಯಲ್ಲಿ ಕೃಷಿಕರು ರಬ್ಬರ್‌ ಬೆಳೆಯುವುದರಿಂದ ಹಿಂದೆ ಸರಿಯುತ್ತಿದ್ದಾರೆ.

Advertisement

ರಬ್ಬರ್‌ ಬೋರ್ಡ್‌ ಮತ್ತು ಕೇರಳ ಸರಕಾರ ಅಂಗೀಕರಿಸಿದ ಒಂದು ಕಿಲೋ ರಬ್ಬರ್‌ ಉತ್ಪಾದಿಸಲು ತಗಲುವ ವೆಚ್ಚ 174 ರೂಪಾಯಿಯಾಗಿದೆ. ನಾಲ್ಕನೇ ಶ್ರೇಣಿಯ ರಬ್ಬರ್‌ಗೆ ಕೃಷಿಕನಿಗೆ ಲಭಿಸುವ ಮೊತ್ತ ಕೇವಲ 125 ರೂ.

ಕೇಂದ್ರ ಸರಕಾರ ರಬ್ಬರ್‌ ಕೈಗಾರಿಕಾ ಘಟಕಗಳಿಗಿರುವ ಅಸಂಸ್ಕೃತ ವಸ್ತುವಾಗಿ ಪರಿಗಣಿಸಿದೆ. ರಬ್ಬರ್‌ ಕೃಷಿ ಬೆಳೆಯಾಗಿ ಕೇರಳ ಸರಕಾರ ಅಂಗೀಕರಿಸಿದರೆ ಸ್ವಾಮಿನಾಥನ್‌ ಆಯೋಗ ಶಿಫಾರಸು ಪ್ರಕಾರ ರಬ್ಬರ್‌ ಕಿಲೋ ಒಂದಕ್ಕೆ 261 ರೂಪಾಯಿ ಲಭಿಸಬೇಕಾಗಿತ್ತು. ಬೆಲೆ ಸ್ಥಿರತೆ ನಿಧಿ ಬಳಸಿ ಕಿಲೋ ಒಂದಕ್ಕೆ 200 ರೂ. ನೀಡಬೇಕೆಂದು ಕೃಷಿಕರು ಬೇಡಿಕೆಯಿಟ್ಟಿದ್ದರೂ ಪರಿಗಣಿಸಿಲ್ಲ. 150 ರೂಪಾಯಿ ಲಭಿಸುವ ರೀತಿಯಲ್ಲಿ ಸಬ್ಸಿಡಿ ವಿತರಣೆಗೆ ಯಾವುದೇ ಸಮಯ ಮಿತಿ ಇಲ್ಲ. ಇದರಿಂದಾಗಿ ಕೃಷಿಕರು ಹೈರಾಣಾಗಿದ್ದಾರೆ.

ಮಳೆಯ ಕಾರಣದಿಂದ ಕೃಷಿಕರು ಸಂದಿಗ್ಧ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ಪ್ರಸ್ತುತ ರಬ್ಬರ್‌ಗೆ ರೈನ್‌ ಗಾರ್ಡ್‌ ಹಾಕಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಟ್ಯಾಪಿಂಗ್‌ ನಡೆಸಲು ಸಾಧ್ಯವಾಗದ ಸ್ಥಿತಿಯಿದೆ. ಇದರಿಂದ ಕೃಷಿಕರಿಗೆ ಇನ್ನಷ್ಟು ನಷ್ಟ ಸಂಭವಿಸಲಿದೆ ಎಂದು ರಬ್ಬರ್‌ ಕೃಷಿಕರ ಅಂಬೋಣ.

ಕಬ್ಬು ಕೃಷಿಕರಿಗೆ ಹಲವು ಸವಲತ್ತುಗಳನ್ನು ಸರಕಾರ ಘೋಷಿಸಿದೆ. ಆದರೆ ರಬ್ಬರ್‌ ಕೃಷಿಕರಿಗೆ ಯಾವುದೇ ಸವಲತ್ತು ಘೋಷಿಸಿಲ್ಲ. ನ್ಯಾಯ ಬೆಲೆ ಲಭಿಸಿದರೆ ದೇಶದಲ್ಲಿ ರಬ್ಬರ್‌ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ನಾಲ್ಕು ವರ್ಷಗಳ ಹಿಂದೆ ಇದ್ದ ರಬ್ಬರ್‌ ಬೆಲೆ ಇದೀಗ ಅರ್ಧಕ್ಕಿಳಿದಿದೆ. ಆದರೆ ಇದೇ ವೇಳೆ ಟರ್‌ – ಟ್ಯೂಬ್‌ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿದೆ.

Advertisement

ಲಾಭ ಟಯರ್‌ ಕಂಪೆನಿಗಳಿಗೆ  
ಒಟ್ಟು 12.56 ಲಕ್ಷ ರಬ್ಬರ್‌ ಕೃಷಿಕ ರಿದ್ದು, ಇವರಿಗೆ ನಷ್ಟ ಸಂಭವಿಸುತ್ತಿದೆ. ಇದೇ ವೇಳೆ 8 ಟಯರ್‌ ಕಂಪೆನಿಗಳಿಗೆ ಲಾಭ ತಂದು ಕೊಡುತ್ತಿದೆ. ರಬ್ಬರ್‌ ಆಮದು ಮಾಡಿಕೊಳ್ಳುವುದರಿಂದ ಈ ಕಂಪೆನಿಗಳಿಗೆ 10,800 ಕೋಟಿ ರೂಪಾಯಿ ಲಾಭವಾಗುತ್ತದೆ. ಈ ಮೂಲಕ ಸರಕಾರಕ್ಕೆ ಸುಂಕವಾಗಿ ಒಂದು ಟನ್‌ಗೆ 42,000 ರೂ. ಲಭಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next