Advertisement

ಓಮೆಕ್ರಾನ್ ಭೀತಿ : ವಿದೇಶದಿಂದ ಬರುವ ಪ್ರವಾಸಿಗರಿಗೆ RTPCR ತಪಾಸಣೆ ಕಡ್ಡಾಯ ; ಗೋವಾ ಸಿಎಂ

05:22 PM Dec 04, 2021 | Team Udayavani |

ಪಣಜಿ: ಜಗತ್ತಿನ ಹಲವು ದೇಶಗಳಲ್ಲಿ ಓಮೆಕ್ರಾನ್ ಕರೋನಾ ರೂಪಾಂತರಿ ಪತ್ತೆಯಾಗುತ್ತಿದ್ದು ಆತಂಕ ಹೆಚ್ಚುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ.

Advertisement

ವಿದೇಶದಿಂದ ಬರುವ ಎಲ್ಲ ಪ್ರವಾಸಿಗರಿಗೂ RTPCR ತಪಾಸಣೆ ಖಡ್ಡಾಯಗೊಳಿಸಲಾಗಿದ್ದು ತವೇ ಸ್ವತಃ ಮನೆಯಲ್ಲಿ ಕ್ವಾರಂಟೈನ್ ಆಗಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಪಣಜಿಯಲ್ಲಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು- ಹೋಟೆಲ್ ರೂಂಗಳಲ್ಲಿ ಕ್ವಾರಂಟೈನ್‍ನಲ್ಲಿರುವ ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಪ್ರತಿದಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕರೋನಾ ರೂಪಾಂತರಿ ಓಮೆಕ್ರೊನ್ ಪತ್ತೆಗಾಗಿ ಗೋವಾದಿಂದ ಕೆಲ ಸ್ಯಾಂಪಲ್ಸಗಳನ್ನು ಪುಣೆಗೆ ಕಳುಹಿಸಲಾಗಿದ್ದು ವರದಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಗೋವಾ ಸಜ್ಜಾಗಿದ್ದು ರೂಪಾಂತರಿ ತೆಡೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಗೋವಾ ರಾಜ್ಯದಲ್ಲಿ ಸದ್ಯ ಕರೋನಾ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಶೇ.97.90 ರಷ್ಟಿದೆ. ರಾಜ್ಯದಲ್ಲಿ ಸದ್ಯ 380 ಕರೋನಾ ಸಕ್ರೀಯ ಪ್ರಕರಣಗಳಿವೆ.

ಇದನ್ನೂ ಓದಿ : ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next