Advertisement

ಅಮಾನ್ಯ ಠೇವಣಿಯ ವಿವಾದ

06:00 AM Jun 24, 2018 | |

ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ (ಎಡಿಸಿಬಿ) ಕಳೆದ ವರ್ಷ ನೋಟು ಅಮಾನ್ಯಗೊಂಡ ನಂತರದ ಐದು ದಿನಗಳಲ್ಲಿ 745.59 ಕೋಟಿ ರೂ. ಅಮಾನ್ಯಗೊಂಡ ನೋಟುಗಳನ್ನು ಜಮೆ ಮಾಡಿದೆ ಎಂಬುದಾಗಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ನಬಾರ್ಡ್‌ ಈ ಮಾಹಿತಿ ನೀಡಿದೆ. ಈ ಸಂಸ್ಥೆಗೆ ಅಮಿತ್‌ ಶಾ 2000ನೇ ಇಸ್ವಿಯಲ್ಲಿ ನಿರ್ದೇಶಕರಾಗಿ ನೇಮಕವಾಗಿದ್ದು, ಇಂದಿಗೂ ಅದೇ ಹುದ್ದೆಯಲ್ಲಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಬಾರ್ಡ್‌, ಎಡಿಸಿಬಿ 9 ಸಾವಿರ ಕೋಟಿ ರೂ. ವಹಿವಾಟು ಹೊಂದಿದೆ. ಬ್ಯಾಂಕ್‌ನ 1.6 ಲಕ್ಷ ಖಾತೆಗಳಿಂದ ಈ ಮೊತ್ತ ಜಮೆಯಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಅಸಹಜ ಚಟುವಟಿಕೆಗಳಿಲ್ಲ. ಎಲ್ಲ ಡೆಪಾಸಿಟ್‌ಗಳೂ ಕೆವೈಸಿ ನಿಯಮಕ್ಕೆ ಬದ್ಧವಾಗಿವೆ ಎಂದಿದೆ. ಆಡಳಿತ ಮಂಡಳಿಯಲ್ಲಿ ಶಾ ಹಾಗೂ ಬಿಜೆಪಿ ನಾಯಕರುಳ್ಳಂಥ ಗುಜರಾತ್‌ನ 11 ಸಹಕಾರಿ ಬ್ಯಾಂಕುಗಳಲ್ಲಿ ಐದೇ ದಿನದಲ್ಲಿ ಬರೋಬ್ಬರಿ 3,118 ಕೋಟಿ ರೂ. ಜಮೆಯಾಗಿರುವುದು ಬೆಳಕಿಗೆ ಬಂದಿದೆ. ನೋಟು ಅಮಾನ್ಯದ ಅವಧಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಇದೀಗ ಅಧಿಕೃತವಾಗಿದೆ. ನೋಟು ಅಮಾನ್ಯದ ವೇಳೆ ಕಪ್ಪು ಹಣವನ್ನು ಬಿಳಿಯಾಗಿಸಲಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಆರೋಪಿಸಿದ್ದಾರೆ. ಅಲ್ಲದೆ ಒಟ್ಟು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಹಕಾರ ಸಂಘಗಳಿಂದಲೇ ಹೆಚ್ಚಿನ ಮೊತ್ತ (14,293.71 ಕೋಟಿ ರೂ.) ಜಮೆಯಾಗಿದೆ. ಗುಜರಾತ್‌ ಸಚಿವ ಜಯೇಶ್‌ಭಾಯಿ ರಡಾಡಿಯಾ ಚೇರ್ಮನ್‌ ಆಗಿರುವ ರಾಜ್‌ಕೋಟ್‌ ಜಿಲ್ಲಾ ಸಹಕಾರ ಸಂಘವು 693.19 ಕೋಟಿ ರೂ. ಡೆಪಾಸಿಟ್‌ ಮಾಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next