Advertisement

RSS; ಹಿಂದೂರಾಷ್ಟ್ರ ನಿರ್ಮಾಣದ ಅಗತ್ಯವಿಲ್ಲ : ದತ್ತಾತ್ರೇಯ ಹೊಸಬಾಳೆ

12:37 AM Nov 08, 2023 | Team Udayavani |

ಹೊಸದಿಲ್ಲಿ: “ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಅಥವಾ ಹೊಸದಾಗಿ ಹಿಂದೂರಾಷ್ಟ್ರವನ್ನು ನಿರ್ಮಿ ಸುವ ಅಗತ್ಯವೇ ಇಲ್ಲ! ಭಾರತ ಹಿಂದಿ ನಿಂದಲೂ ಹಿಂದೂರಾಷ್ಟ್ರವಾಗಿಯೇ ಇತ್ತು ಮುಂದೆಯೂ ಹಾಗೇ ಇರಲಿದೆ’. ಹೀಗೆಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ (ಸರಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

Advertisement

ಗುಜರಾತ್‌ನ ಕಛ ಜಿಲ್ಲೆಯಲ್ಲಿ ನಡೆದ ಸಂಘದ ಪದಾಧಿಕಾರಿಗಳ ಮಂಡಳಿ ಸಭೆ ವೇಳೆ ಮಾಧ್ಯಮಗಳೊಂದಿಗೆ ಹೊಸಬಾಳೆ ಮಾತನಾಡಿದ್ದಾರೆ. ಈ ವೇಳೆ ಭಾರತ ಯಾವಾಗ ಹಿಂದೂರಾಷ್ಟ್ರವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ ಈಗಾಗಲೇ ಹಿಂದೂರಾಷ್ಟ್ರ, ಮುಂದೆಯೂ ಹಾಗೆಯೇ ಇರಲಿದೆ. ಆರ್‌ಎಸ್‌ಎಸ್‌ ಸಂಸ್ಥಾ ಪಕ ರಾದ ಹೆಡಗೇವಾರ್‌ ಅವರು ಒಮ್ಮೆ ಹೇಳಿದ್ದರು-ಎಲ್ಲಿಯವರೆಗೂ ಈ ದೇಶ ದಲ್ಲಿ ಒಬ್ಬನೇ ಒಬ್ಬ ಹಿಂದೂ ಇರು ತ್ತಾನೋ ಅಲ್ಲಿಯವರೆಗೂ ಈ ದೇಶ ಹಿಂದೂ ರಾಷ್ಟ್ರವೆಂದು. ಸಂವಿಧಾನ ರಾಷ್ಟ್ರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಅದು ವಿಭಿನ್ನ ವಿಷಯ, ಆದರೆ ರಾಷ್ಟ್ರವಾಗಿ ಭಾರತ ಈ ಹಿಂದೆಯೂ, ಇಂದೂ, ಮುಂದೆಯೂ ಹಿಂದೂ ರಾಷ್ಟ್ರವಾಗಿಯೇ ಇರಲಿದೆ ಹಾಗೂ ಸಮಾಜದ ಏಕತೆಯನ್ನು ಬಯಸುವುದು ಮತ್ತು ಅದರ ಅಭಿವೃದ್ಧಿಗಾಗಿ ಸಮಯ ವ್ಯಯಿಸಿ ಶ್ರಮಿಸುವುದೇ ಹಿಂದುತ್ವ’ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next